ಕರ್ನಾಟಕ

karnataka

ETV Bharat / state

ಬಟ್ಟೆ ಅಂಗಡಿಗೆ ಬೆಂಕಿಯಿಡೋ ಯತ್ನ..  ಸಿಸಿಟಿವಿಯಲ್ಲಿ ಸೆರೆಯಾಯ್ತು  ದುಷ್ಕರ್ಮಿಗಳ ಕೃತ್ಯ

ನಗರದ ಆಜಾದ್ ರಸ್ತೆಯಲ್ಲಿರುವ ವಿಶಾಲ್ ಹ್ಯಾಂಡ್ ಲೂಮ್ಸ್ ಬಟ್ಟೆ ಅಂಗಡಿಗೆ 18-06-2019 ರ ರಾತ್ರಿ 12-05 ಸಮಯದಲ್ಲಿ ಬೈಕ್ ನಲ್ಲಿ ಬಂದ ಇಬ್ಬರೂ ದುಷ್ಕರ್ಮಿಗಳು ಬೆಂಕಿ ಹಚ್ಚಲು ಪ್ರಯತ್ನ ಮಾಡಿರುವ ಘಟನೆ ಸಿ ಸಿ ಟಿವಿ ಯಲ್ಲಿ ಸೆರೆಯಾಗಿದೆ.

ಬಟ್ಟೆ ಅಂಗಡಿಗೆ ಬೆಂಕಿ ಹಚ್ಚಲು ಯತ್ನಿಸಿದ ದುಷ್ಕರ್ಮಿಗಳು

By

Published : Jun 21, 2019, 1:55 PM IST

ಚಿಕ್ಕಮಗಳೂರು : ನಗರದಲ್ಲಿ ರಾತ್ರೋ ರಾತ್ರಿ ದುಷ್ಕರ್ಮಿಗಳು ಬಟ್ಟೆ ಅಂಗಡಿಗೆ ಬೆಂಕಿ ಹಚ್ಚಿ ಅಂಗಡಿಯನ್ನೇ ಸುಟ್ಟು ಹಾಕಲು ಪ್ರಯತ್ನ ಮಾಡಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಗರದ ಆಜಾದ್ ರಸ್ತೆಯಲ್ಲಿರುವ ವಿಶಾಲ್ ಹ್ಯಾಂಡ್ ಲೂಮ್ಸ್ ಬಟ್ಟೆ ಅಂಗಡಿಗೆ 18-06-2019 ರ ರಾತ್ರಿ 12-05 ಸಮಯದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬೆಂಕಿ ಹಚ್ಚಲು ಪ್ರಯತ್ನ ಮಾಡಿರುವ ಘಟನೆ ಸಿ ಸಿ ಟಿವಿ ಯಲ್ಲಿ ಸೆರೆಯಾಗಿದ್ದು, ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಬಟ್ಟೆ ಅಂಗಡಿಗೆ ಬೆಂಕಿ ಹಚ್ಚಲು ಯತ್ನಿಸಿದ ದುಷ್ಕರ್ಮಿಗಳು

ಮೂಡಿಗೆರೆ ನಗರದ ಸ್ಥಳೀಯ ನಿವಾಸಿ ಅನುಪಮ್ ಮೊಂಡಾಲ್ ಎಂಬುವವರಿಗೆ ಸೇರಿದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಎಚ್ಚರ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಸದ್ಯ ದುಷ್ಕರ್ಮಿಗಳು ಎಸೆಗಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೂಡಿಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ABOUT THE AUTHOR

...view details