ಚಿಕ್ಕಮಗಳೂರು:ಜಾತಿ ಗಣತಿ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಸಿ ಟಿ ರವಿ ಅವರು, ಅಂದಿನ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಾತಿ ಗಣತಿ ವರದಿಯನ್ನು ಸಿದ್ದರಾಮಯ್ಯ ಸರ್ಕಾರವೇ ಕಸದ ಬುಟ್ಟಿಯ ಕೆಳಗಿಟ್ಟಿತ್ತು: ಸಿ.ಟಿ. ರವಿ - ಜಾತಿ ಗಣತಿ
ಜಾತಿ ಗಣತಿ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಿ ಟಿ ರವಿ ಪ್ರತಿಕ್ರಿಯಿಸಿ, ಈ ಹಿಂದೆ ಇದ್ದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಚಿವ ಸಿ.ಟಿ.ರವಿ
ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆ ಕುರಿತು ಮಾತನಾಡಿದ ಅವರು, ಆ ವರದಿಯನ್ನು ಆ ಸಿದ್ದರಾಮಯ್ಯನವರ ಸರ್ಕಾರವೇ ಮಂಡನೆ ಮಾಡಲಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಯಾರಿಸಿದ್ದ ವರದಿ ಅದಾಗಿದ್ದು, ಮೂರು ವರ್ಷ ಆ ವರದಿ ಎಲ್ಲಿತ್ತು ಅಂತ ಕೇಳಬೇಕು. ಮೂರು ವರ್ಷ ಆ ವರದಿಯನ್ನು ಕಸದ ಬುಟ್ಟಿ ಕೆಳಗಿಟ್ಟಿದ್ದರು. ಅವರೇ ತಯಾರಿಸಿದ ವರದಿ ಮೇಲೆ ಅವರಿಗೇ ವಿಶ್ವಾಸವಿರಲಿಲ್ಲ. ಇನ್ನೊಂದು ಸರ್ಕಾರದ ಬಗ್ಗೆ ನಿರೀಕ್ಷೆ ಮಾಡೋದು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.