ಕರ್ನಾಟಕ

karnataka

ETV Bharat / state

ಕೈಯಲ್ಲಿ ಮಚ್ಚು, ರಾಜಾರೋಷವಾಗಿ ಓಡಾಟ... ಕೊಪ್ಪದಲ್ಲಿ ಆತಂಕ ಸೃಷ್ಟಿಸಿದ ಅಪರಿಚಿತ! - Kannada news

ಅಪರಿಚಿತ ವ್ಯಕ್ತಿವೋರ್ವ ಮಚ್ಚು ಹಿಡಿದು ರಸ್ತೆಯಲ್ಲಿ ಓಡಾಡುವ ಮೂಲಕ ಕೊಪ್ಪ ತಾಲೂಕಿನಲ್ಲಿ ಆತಂಕ ಸೃಷ್ಟಿಸಿದ್ದಾನೆ. ಸದ್ಯ ಈತನಿಗಾಗಿ ಪೊಲೀಸರು ತಲಾಶ್​ ನಡೆಸಿದ್ದಾರೆ.

ಮಚ್ಚು ಹಿಡಿದು ಆತಂಕ ಸೃಷ್ಟಿಸಿದ ಅಪರಿಚಿತ

By

Published : Jul 23, 2019, 1:00 PM IST

Updated : Jul 23, 2019, 2:59 PM IST

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪದ ತಾಲೂಕಿನ ರಸ್ತೆಯಲ್ಲಿಯೇ ಕೈಯಲ್ಲಿ ಮಚ್ಚು ಹಿಡಿದು ಅಪರಿಚಿತನೋರ್ವ ಆತಂಕ ಸೃಷ್ಟಿಸಿರುವ ಘಟನೆ ಬೆಳಕಿಗೆ ಬಂದಿದೆ.

ಈ ವ್ಯಕ್ತಿ ಕೆಲ ಹೊತ್ತು ಕೈಯಲ್ಲಿ ಮಚ್ಚು ಹಿಡಿದು ಕೊಪ್ಪ ಬಸ್ ನಿಲ್ದಾಣ ಹಾಗೂ ಮುಖ್ಯ ರಸ್ತೆಯಲ್ಲಿ ಓಡಾಡಿರುವ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಚ್ಚು ಹಿಡಿದು ಆತಂಕ ಸೃಷ್ಟಿಸಿದ ಅಪರಿಚಿತ

ಮಚ್ಚು ಹಿಡಿದು ಓಡಾಡುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ವ್ಯಕ್ತಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಆದರೂ ಆತ ಪತ್ತೆಯಾಗಿಲ್ಲ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ವ್ಯಕ್ತಿಯ ಫೋಟೊ ಆಧರಿಸಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Last Updated : Jul 23, 2019, 2:59 PM IST

ABOUT THE AUTHOR

...view details