ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಈ ಭಾಗದ ಜನರು ಹೇಳುತ್ತಿದ್ದಾರೆ.
ಮೂಡಿಗೆರೆ ತಾಲೂಕಿನ ಹಲವೆಡೆ 15 ಸೆಕೆಂಡ್ಗಳ ಕಾಲ ಭೂಮಿ ಕಂಪನ - Land tremors
ನಿನ್ನೆ ಮಧ್ಯರಾತ್ರಿ 1.50ರ ಸಮಯದಲ್ಲಿ ಭೂಮಿ ಅಲುಗಾಡಿರೋ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದು, ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ, ಕೆಸವಳಲು, ಬಿಳ್ಳೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸ್ಥಳೀಯರಿಗೆ ಭೂಮಿ ಕಂಪಿಸಿರುವ ಅನುಭವ ಆಗಿದೆ..
ಮೂಡಿಗೆರೆ
ನಿನ್ನೆ ಮಧ್ಯರಾತ್ರಿ 1.50ರ ಸಮಯದಲ್ಲಿ ಭೂಮಿ ಅಲುಗಾಡಿರೋ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ, ಕೆಸವಳಲು, ಬಿಳ್ಳೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸ್ಥಳೀಯರಿಗೆ ಭೂಮಿ ಕಂಪಿಸಿರುವ ಅನುಭವ ಆಗಿದೆ.
ಈ ಬಗ್ಗೆ ಒಬ್ಬೊಬ್ಬರಾಗಿಯೇ ಮಾಹಿತಿ ನೀಡುತ್ತಿದ್ದು, ಸುಮಾರು 15 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿರುವ ಅನುಭವ ನಮಗೆ ಆಗಿದೆ ಎಂದು ಹೇಳುತ್ತಿದ್ದಾರೆ.