ಕರ್ನಾಟಕ

karnataka

ETV Bharat / state

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುಂಡರ ಜೀಪ್​ ರೈಡಿಂಗ್ : ಪರಿಸರ ಪ್ರೇಮಿಗಳ ಆಕ್ರೋಶ

ಕಳೆದ ಕೆಲ ದಿನಗಳ ಹಿಂದೆ ಜೆಸಿಬಿ ವಾಹನದಲ್ಲಿ ಆನೆ ಮತ್ತು ಮರಿಗಳನ್ನು ಬೆದರಿಸಿದ ವಿಡಿಯೋ ವೈರಲ್ ಆಗಿತ್ತು. ಮತ್ತೆ ಈಗ ಪುಂಡರು ತಮ್ಮ ವಾಹನದಲ್ಲಿ ಮೋಜು, ಮಸ್ತಿ ಮಾಡುವ ವಿಡಿಯೋ ಲಭಿಸಿದೆ. ಇದನ್ನೆಲ್ಲಾ ಗಮನಿಸಿದರೆ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶ..

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುಂಡರ ಜೀಪ್​ ರೈಡಿಂಗ್
ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುಂಡರ ಜೀಪ್​ ರೈಡಿಂಗ್

By

Published : Apr 11, 2022, 7:40 PM IST

Updated : Apr 11, 2022, 8:16 PM IST

ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ವ್ಯಾಪ್ತಿಯ ಹೆಬ್ಬೆ, ಮುತ್ತೋಡಿ ವಲಯದಲ್ಲಿ ಪುಂಡರು ತಮ್ಮ ಖಾಸಗಿ ಜೀಪ್​​ಗಳಲ್ಲಿ ಕಾಡಿನ ಮಧ್ಯೆ ಅದರಲ್ಲೂ ಪ್ರಮುಖ ಪ್ರದೇಶದಲ್ಲಿ ಬೇಕಾ ಬಿಟ್ಟಿಯಾಗಿ ವಾಹನದಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ತಡಬೇ ಹಳ್ಳದಲ್ಲಿ ನೀರಿನ ಮಧ್ಯೆ ಜೀಪ್ ರ್ಯಾಲಿ ಮಾಡಿದ್ದು, ಇಲ್ಲಿಗೆ ಇವರು ಹೋಗಿದ್ದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.

ತಿಳಿಯದೇ ಅಥವಾ ಅಕ್ರಮವಾಗಿ ಸಾರ್ವಜನಿಕರು ಇಲ್ಲಿಗೆ ಪ್ರವೇಶಿಸಿದರೆ ಪ್ರಕರಣ ದಾಖಲಿಸುವ ಅಧಿಕಾರಿಗಳು ಇವರನ್ನು ಯಾಕೆ ಒಳಗೆ ಬಿಟ್ಟಿದ್ದಾರೆ ಎನ್ನುವ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಜೆಸಿಬಿ ವಾಹನದಲ್ಲಿ ಆನೆ ಮತ್ತು ಮರಿಗಳನ್ನು ಬೆದರಿಸಿದ ವಿಡಿಯೋ ವೈರಲ್ ಆಗಿತ್ತು.

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುಂಡರ ಜೀಪ್​ ರೈಡಿಂಗ್

ಮತ್ತೆ ಈಗ ಪುಂಡರು ತಮ್ಮ ವಾಹನದಲ್ಲಿ ಮೋಜು, ಮಸ್ತಿ ಮಾಡುವ ವಿಡಿಯೋ ಲಭಿಸಿದೆ. ಈ ಸಂಬಂಧ ಈ ಪುಂಡರ ಮೇಲೆ ಅಧಿಕಾರಿಗಳು ಪ್ರಕರಣ ದಾಖಲಿಸಬೇಕು ಮತ್ತು ವಾಹನವನ್ನು ವಶಕ್ಕೆ ಪಡೆಯಬೇಕು ಎಂದು ವನ್ಯಜೀವಿ ಆಸಕ್ತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೇ ಎರಡನೇ ವಾರದಲ್ಲಿ ಎಸ್​ಎಸ್ಎಲ್​ಸಿ ಫಲಿತಾಂಶ ಪ್ರಕಟ: ಶಿಕ್ಷಣ ಸಚಿವ ನಾಗೇಶ್

ಪುಂಡರು ಜೀಪ್ ಮೇಲೆ ಕೂತು ಧೂಮಪಾನ, ಮದ್ಯಪಾನ ಮಾಡಿದ್ದಾರೆ. ಈ ಸಂಬಂಧ ನಿರ್ಲಕ್ಷವಹಿಸಿದ ಸಿಬ್ಬಂದಿ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಮಾಡಲಾಗಿದೆ.

Last Updated : Apr 11, 2022, 8:16 PM IST

For All Latest Updates

TAGGED:

ABOUT THE AUTHOR

...view details