ಚಿಕ್ಕಮಗಳೂರು:ರಾಜಕೀಯಕ್ಕಾಗಿ ಹಿಂದುತ್ವ ಬಳಸಿದರೆ ನಾವು ಏನೂ ಹೇಳಲು ಸಾಧ್ಯವಿಲ್ಲ ಎಂದು ಭಜರಂಗದಳದ ಜಿಲ್ಲಾ ಸಂಚಾಲಕ ಹುದ್ದೆಯಿಂದ ಬದಲಾಗಿರುವ ತುಡುಕೂರು ಮಂಜು, ಪ್ರವಾಸೋದ್ಯಮ ಸಚಿವ ಸಿ ಟಿ ರವಿ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಸಿ ಟಿ ರವಿಯವರದು ರಾಜಕೀಯಕ್ಕಾಗಿ ಹಿಂದುತ್ವ.. ತುಡುಕೂರು ಮಂಜು ಪರೋಕ್ಷ ವಾಗ್ದಾಳಿ! - ದತ್ತಜಯಂತಿ ]
ದತ್ತ ಪೀಠದ ವಿಚಾರ ಚುನಾವಣೆ ಸಂದರ್ಭದಲ್ಲಿ ಮಾತ್ರ ಮುಂಚೂಣಿಯಲ್ಲಿರುತ್ತಾರೆ. ಬಾಕಿ ನಾಲ್ಕು ವರ್ಷ ಅವರು ಆ ವಿಚಾರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹಿಂದು ಮುಖಂಡ ತುಡುಕೂರು ಮಂಜು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಹುದ್ದೆ ಬದಲಾವಣೆ ಆಗಿದ್ದಕ್ಕೆ ನನಗೆ ಯಾವುದೇ ಬೇಸರ ಇಲ್ಲ.ಆದರೆ, ಸಮಯ ಅನ್ನೋದು ಇರುತ್ತೆ. ದತ್ತಜಯಂತಿ ನಡೆಯುತ್ತಿದೆ ಅಂತಾಧಿಡೀರ್ಬದಲಾವಣೆ ಮಾಡಬಾರದಿತ್ತು. ರಾಜಕೀಯ ಬಿಡಿ ದತ್ತಾಪೀಠಕ್ಕೆ ಹಿಂದೂ ಅರ್ಚಕರ ನೇಮಕ ಮಾಡಿ. ದತ್ತ ಪೀಠದ ಹೆಸರಿನಲ್ಲಿ ರಾಜಕೀಯ ಬೆರೆಸಿದ್ದನ್ನು ನಾನು ವಿರೋಧ ಮಾಡಿದ್ದು, ಇದು ಕೆಲವರಿಗೆ ನೋವುಂಟು ಮಾಡಿರಬಹುದು. ಆದರೆ, ನನ್ನ ಹಿಂದುತ್ವದ ಕಿಚ್ಚು ಹಾಗೂ ದತ್ತ ಪೀಠದ ಹೋರಾಟದಲ್ಲಿ ರಾಜಿ ಸಂಧಾನ ಇಲ್ಲ ಎಂದಿದ್ದಾರೆ.
ಅರ್ಚಕರ ನೇಮಕ ಮಾಡಬೇಕು ಎಂಬುದು ನನ್ನ ನಿಲುವಾಗಿತ್ತು. ರಾಜಕೀಯ ಬಿಟ್ಟು ಹಿಂದೂ ಆರ್ಚಕರ ನೇಮಕ ಮಾಡಿ ಎಂದು ಸಚಿವ ಸಿಟಿ ರವಿಗೆ ಟಾಂಗ್ ಕೊಟ್ಟಿದ್ದಾರೆ.