ಚಿಕ್ಕಮಗಳೂರು :ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಹಿನ್ನೆಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಅಪಾಯವಿದ್ದರೂ ಮಿನಿ ಜಲಪಾತಗಳನ್ನು ವಾಹನ ಸವಾರರು ವೀಕ್ಷಣೆ ಮಾಡುತ್ತಿದ್ದಾರೆ. ಚಾರ್ಮಾಡಿ ಘಾಟ್ ದಕ್ಷಿಣ ಕನ್ನಡ ಚಿಕ್ಕಮಗಳೂರು ಸಂಪರ್ಕಿಸುವ ರಸ್ತೆಯಲ್ಲಿ ಜಲಪಾತಗಳ ಸ್ವರ್ಗವೇ ನಿರ್ಮಾಣವಾಗಿದೆ.
ಮಲೆನಾಡಿನಲ್ಲಿ ಬಿಡುವು ನೀಡಿ ಮಳೆ ಸುರಿಯುತ್ತಿದೆ. ಕೊಪ್ಪ ಭಾಗದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ನಿರಂತರ ಮಳೆಗೆ ಜಯಪುರದಲ್ಲಿ ಅಂಗಡಿಯ ಗೋಡೆ ಕುಸಿತ ಉಂಟಾಗಿದೆ. ಕಟ್ಟಡ ಕುಸಿಯುವ ಭೀತಿಯಲ್ಲಿ ಮಾಲೀಕರಿದ್ದು, ಮಳೆಯಿಂದ ಜನ ಜೀವನದ ಸಂಪೂರ್ಣ ಅಸ್ತವ್ಯಸ್ತವಾಗಿದೆ.