ಚಿಕ್ಕಮಗಳೂರು: ಪ್ರಪಂಚದಲ್ಲಿ ಪ್ರತಿನಿತ್ಯ ಹೊಸ ಹೊಸ ವಿಷಯಗಳು, ಆಸಕ್ತಿಕರ-ಆಶ್ಚರ್ಯಕರ ವಿಷಯಗಳು ನಮ್ಮ ಗಮನಕ್ಕೆ ಬಂದು ಹೇಗೆ, ಏನು? ಎಂಬ ಪ್ರಶ್ನೆಗೆ ದಾರಿ ಮಾಡಿಕೊಡುತ್ತವೆ. ಇದೀಗ ಚಿಕ್ಕಮಗಳೂರು ನಗರದ ಹೊಲವೊಂದರಲ್ಲಿನ ಈಚಲು ಮರದಲ್ಲಿ ಗಣಪನ ಆಕಾರ ಮೂಡಿದೆ. ಈ ಗಣಪನನ್ನು ಕಂಡು ಎಲ್ಲರೂ ಮೂಕವಿಸ್ಮಿತರಾಗಿದ್ದಾರೆ.
ಗಣಪನನ್ನೇ ಹೋಲುವ ಸೊಂಡಿಲು, ಕಣ್ಣು, ಕೈ, ದೇಹದ ಆಕಾರ ಮರದ ಬುಡದಲ್ಲಿ ಮೂಡಿದೆ. ಸ್ಥಳೀಯರು ಬಂದು ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನಗರದಲ್ಲಿ ನಾಲ್ಕೈದು ಗಣಪತಿ ದೇವಸ್ಥಾನಗಳಿದ್ದು, ಎಲ್ಲ ಗಣಪತಿಗಳು ಪಶ್ಚಿಮ ದಿಕ್ಕಿಗೆ ಮುಖ ಮಾಡಿವೆ. ಆದರೆ ಈ ಈಚಲು ಮರದಲ್ಲಿ ಉದ್ಭವಿಸಿರುವ ಗಣಪತಿ ಪೂರ್ವ ದಿಕ್ಕಿಗೆ ಮುಖ ಮಾಡಿರೋದು ಕುತೂಹಲಕ್ಕೆ ಕಾರಣವಾಗಿದೆ.