ಕರ್ನಾಟಕ

karnataka

ETV Bharat / state

ಚಾರ್ಮಾಡಿ ಘಾಟ್​​​​​​​ ಅರಣ್ಯದಲ್ಲಿ ಬೆಂಕಿ; ಹತ್ತಾರು ಎಕರೆ ಅರಣ್ಯ ಸುಟ್ಟು ಕರಕಲು

ಚಾರ್ಮಾಡಿ ಘಾಟ್ ಪ್ರದೇಶದ ಬಾರಿಮಲೆ ಗುಡ್ಡದಲ್ಲಿ ಬೆಂಕಿ ಹತ್ತಿಕೊಂಡ ಕಾರಣ ಹತ್ತಾರು ಎಕರೆ ಅರಣ್ಯ ಸಂಪತ್ತು ನಾಶವಾಗಿದೆ.

Fire in Charmadi ghat
ಚಾರ್ಮಾಡಿ ಘಾಟಿ

By

Published : Dec 23, 2020, 8:44 PM IST

Updated : Dec 23, 2020, 9:02 PM IST

ಚಿಕ್ಕಮಗಳೂರು: ಜಿಲ್ಲೆಯ ಚಾರ್ಮಾಡಿ ಘಾಟ್​ ಅರಣ್ಯದಲ್ಲಿ ಬೆಂಕಿ ಹತ್ತಿಕೊಂಡಿದೆ. ಶಿಕಾರಿಗೆ ಹೋಗಿರುವಂತಹ ವ್ಯಕ್ತಿಗಳು ಬೆಂಕಿ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಚಾರ್ಮಾಡಿ ಘಾಟ್​ ಅರಣ್ಯದಲ್ಲಿ ಬೆಂಕಿ

ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರಣ್ಯದ ಚಾರ್ಮಾಡಿ ಘಾಟ್ ಪ್ರದೇಶದ ಬಾರಿಮಲೆ ಗುಡ್ಡದಲ್ಲಿ ಈ ಅವಘಡ ಜರುಗಿದೆ. ಬೆಂಕಿ ಹತ್ತಿಕೊಂಡ ಕಾರಣ ಹತ್ತಾರು ಎಕರೆ ಅರಣ್ಯ ಸಂಪತ್ತು ನಾಶವಾಗಿದೆ. ಘಟನೆಯಿಂದ ತುಂಬಾ ಅಮೂಲ್ಯವಾದ ಸಸ್ಯ ಸಂಪತ್ತು ಹಾಗೂ ಅತ್ಯಂತ ಸೂಕ್ಷ್ಮ ಔಷಧ ಸಂಪತ್ತು ಕೂಡ ನಾಶವಾಗಿ ಹೋಗುವ ಆತಂಕ ಎದುರಾಗಿದೆ.

ಇದನ್ನೂ ಓದಿ:ಈಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಜೆಡಿಎಸ್​ಗೆ ಲಾಭವಿಲ್ಲ: ಸಿ.ಟಿ.ರವಿ

ಘಾಟ್​ನ ಬಾಳೂರು ಮೀಸಲು ಅರಣ್ಯದಲ್ಲಿ ಈ ಘಟನೆ ನಡೆದಿದೆ. ಈ ಬೆಂಕಿ ಸುತ್ತಮುತ್ತಲಿನ ಅರಣ್ಯ ಪ್ರದೇಶಕ್ಕೆ ಆವರಿಸಿಕೊಳ್ಳುವ ಆತಂಕ ಮೂಡಿಸುತ್ತಿದೆ. ಕ್ಷಣದಿಂದ ಕ್ಷಣಕ್ಕೆ ಹಬ್ಬುತ್ತಿರುವ ಬೆಂಕಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ.

Last Updated : Dec 23, 2020, 9:02 PM IST

ABOUT THE AUTHOR

...view details