ಚಿಕ್ಕಮಗಳೂರು: ಆಸ್ತಿಗಾಗಿ ಬದುಕಿರುವಾಗಲೇ ವೃದ್ಧೆಯ ಹೆಸರಿನಲ್ಲಿ ಸಂಬಂಧಿಕರು ಮರಣ ಪತ್ರ ಸೃಷ್ಟಿ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ಪುರದಲ್ಲಿ ನಡೆದಿದೆ.
ವೃದ್ಧೆ ಬದುಕಿರುವಾಗಲೇ ಮರಣ ಪತ್ರ ನೀಡಿದ ಅಧಿಕಾರಿಗಳು: ನ್ಯಾಯ ಒದಗಿಸುವಂತೆ ಅಳಲು ತೋಡಿಕೊಂಡ ವೃದ್ಧೆ ವೃದ್ಧೆ ಬದುಕಿದ್ದಾರಾ ಅಥವಾ ಸಾವನ್ನಪ್ಪಿದ್ದಾರಾ ಎಂದು ಪರಿಶೀಲಿಸದೇ ತಾಲೂಕು ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಬದುಕಿರುವಾಗಲೇ ವೃದ್ಧೆ ಹೆಸರಿಗೆ ಮರಣ ಪತ್ರ, ವಂಶವೃಕ್ಷ ನೀಡಿದ್ದಾರೆ.
ಆಸ್ತಿ ಆಸೆಗೆ ನಕಲಿ ದಾಖಲೆ ಸೃಷ್ಟಿ ವೃದ್ಧೆ ಸಂಬಂಧಿಕರು ಮರಣ ಪತ್ರ, ವಂಶವೃಕ್ಷ ಸೃಷ್ಟಿ ಮಾಡಿ ಆಸ್ತಿ ಕಬಳಿಕೆಗೆ ಯತ್ನಿಸಿದ್ದು, ಜಮೀನು ಕಳೆದುಕೊಂಡು ವೃದ್ಧೆ ಸಾರಮ್ಮ ಬೀದಿಗೆ ಬಿದ್ದಿದ್ದಾರೆ. ವೃದ್ಧೆ ಸತ್ತು ಹೋಗಿದ್ದಾರೆಂದು ಮರಣ ಪತ್ರ ಸೃಷ್ಟಿ ಮಾಡಿದ್ದು, ವೃದ್ಧೆಯ ಮರಣ ಪತ್ರ ಬಂದ ಕಾರಣ ರೇಷನ್ ಕಾರ್ಡ್ ಕೂಡ ಬಂದ್ ಆಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಮುಂದಿನ ಚುನಾವಣೆಗೆ ಬೊಮ್ಮಾಯಿ ಅವರದ್ದೇ ನೇತೃತ್ವ: ಸಚಿವ ನಿರಾಣಿ
ಬಾಳೆಕೊಪ್ಪ ಸರ್ವೇ ನಂ 26ರಲ್ಲಿ ಇರುವ ಒಂದು ಎಕರೆ 16 ಗುಂಟೆ ಜಮೀನಿಗಾಗಿ ಸಾರಮ್ಮ ಸಂಬಂಧಿಕರಾದ ಇ.ಟಿ.ಬಾಬು ಹಾಗೂ ಶ್ರೀಜಾ ಎಂಬುವರು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಜಮೀನು ಕೊಡುವುದಿಲ್ಲ ಎಂದು ಇ.ಟಿ.ಬಾಬು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸೂಕ್ತ ನ್ಯಾಯ ಒದಗಿಸುವಂತೆ ವೃದ್ಧೆ ಅಳಲು ತೋಡಿಕೊಂಡಿದ್ದಾರೆ.