ಕರ್ನಾಟಕ

karnataka

ETV Bharat / state

ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ಸ್ವಾಗತಾರ್ಹ: ಡಿ.ಎನ್. ಜೀವರಾಜ್ - ರಾಮಾಯಣ-ಮಹಾಭಾರತ

ಬದುಕಿನ ಸಾರವನ್ನು ಮತ್ತು ಧರ್ಮದಲ್ಲಿ ನಡೆಯುವುದನ್ನು ಬೋಧಿಸುವ ಭಗವದ್ಗೀತೆ ಪಠ್ಯದಲ್ಲಿ ಅಳವಡಿಸುವುದರಿಂದ ಮಕ್ಕಳಲ್ಲಿ ಧಾರ್ಮಿಕ ನಡವಳಿಕೆಗಳು ಜಾಗೃತಗೊಳ್ಳುತ್ತದೆ ಎಂದು ಡಿ ಎನ್​ ಜೀವರಾಜ್​ ಅಭಿಪ್ರಾಯಟ್ಟಿದ್ದಾರೆ.

D. N. Jeevaraj
ಡಿ.ಎನ್.ಜೀವರಾಜ್

By

Published : Mar 19, 2022, 7:51 PM IST

ಚಿಕ್ಕಮಗಳೂರು: ಸ್ವಾತಂತ್ರ್ಯದ ನಂತರ ಬಂದ ಸರ್ಕಾರ ಭಾರತದ ಮೇಲೆ ಆಕ್ರಮಣ ಮಾಡಿದ ಬ್ರಿಟೀಷರನ್ನು ಲಾರ್ಡ್​ ಎಂದೆಲ್ಲಾ ಗುರುತಿಸಿ ಶಿಕ್ಷಣ ನೀಡಿದೆ. ಆ ಪಠ್ಯ ತಿದ್ದುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಹೇಳಿದ್ದಾರೆ.

ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸುವುದಕ್ಕೆ ಸ್ವಾಗತ: ಡಿ.ಎನ್. ಜೀವರಾಜ್

ಭಾರತ ಎಂಬ ನದಿಗೆ ರಾಮಾಯಣ ಮತ್ತು ಮಹಾಭಾರತ ದಂಡೆಗಳಿದ್ದಂತೆ. ಆ ಎರಡು ಗ್ರಂಥದ ಸಾರದಲ್ಲಿ ಶಿಕ್ಷಣ ಬಂದರೆ ಧರ್ಮ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಭಗವದ್ಗೀತೆಯಲ್ಲಿ ಕೃಷ್ಣ ಬದುಕಿನ ಸಾರವನ್ನು ಹೇಳಿದ್ದಾನೆ. ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದರಲ್ಲಿ ತಪ್ಪಿಲ್ಲ. ಈ ರೀತಿಯ ಚಿಂತನೆಗೆ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:ದಿ ಕಾಶ್ಮೀರ ಫೈಲ್ಸ್ ಸಿನಿಮಾ ಬಗ್ಗೆ ಸಿದ್ದರಾಮಯ್ಯ ಆಕ್ಷೇಪಕ್ಕೆ ಶಾಸಕ ಸಿ ಟಿ ರವಿ ಟೀಕೆ

For All Latest Updates

ABOUT THE AUTHOR

...view details