ಚಿಕ್ಕಮಗಳೂರು :ಮತಾಂತರ ನಿಷೇಧ ಕಾಯ್ದೆ ಅಂದ್ರೆ, ಅವರವರ ಮತದಲ್ಲಿ ಸುರಕ್ಷಿತವಾಗಿ ಮತಾಚರಣೆ ಮಾಡಲಿ ಅನ್ನೋದು. ವ್ಯಾಪಾರ, ಭಯ, ಆಮಿಷದ ಮೂಲಕ ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ ಎಂದು ನಗರದಲ್ಲಿ ಶಾಸಕ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಕುರಿತು ಸಿಟಿ ರವಿ ಪ್ರತಿಕ್ರಿಯೆ ನೀಡಿರುವುದು.. ಮತಾಂತರ ಕುರಿತ ಸಿಟಿ ರವಿ ಹೇಳಿಕೆ : ಹೆದರಿಸಿ ಮತಾಂತರ ಮಾಡುವವರು ಭಯ ಪಡಬೇಕು. ಸ್ವಯಿಚ್ಛೆಯಿಂದ ಮತಾಂತರಗೊಳ್ಳುವರಿಗೆ ಕಾಯ್ದೆಯಿಂದ ತೊಡಕಿಲ್ಲ. ಕಾಂಗ್ರೆಸ್ಸಿಗೆ ಸಮಾಜದ ಹಿತ, ರಾಷ್ಟ್ರಹಿತ ಎರಡರ ಕಾಳಜಿಯಿಲ್ಲ. ವೋಟ್ ಬ್ಯಾಂಕ್ ರಾಜನೀತಿ ಮಾತ್ರ ಅವರ ಆದ್ಯತೆ. ಬಹುಸಂಖ್ಯಾತ ಸಮಾಜ ಆಕ್ರಮಣಕಾರಿಯಾಗಿ ಹೊರಟ್ರೆ ಅವರೇ ಮತಾಂತರ ನಿಷೇಧ ಕಾಯ್ದೆ ತನ್ನಿ ಅಂತಾರೆ ಎಂದು ಹೇಳಿದರು.
ಅಂಬೇಡ್ಕರ್-ರಾಮ ಎಲ್ಲಿಗೆ ಹೋಗ್ಬೇಕು?: ಹಿಂದೂಗಳು ಮುಸ್ಲಿಮರಾಗಿ ಮತಾಂತರವಾದ್ರೆ ಅಂಬೇಡ್ಕರ್ಗೆ ಎಲ್ಲಿ ಜಾಗ ಸಿಗುತ್ತೆ. ಕ್ರಿಸ್ತನಿಗೆ ಪರಿವರ್ತನೆಯಾದ್ರೆ ಸಿದ್ದರಾಮಯ್ಯನವರಿಗೆ ಎಲ್ಲಿ ಜಾಗ ಇದೆ. ಹಿಂದೂಗಳು ಬೌದ್ಧರು, ವೈಷ್ಣವರಾದ್ರೆ, ಅಂಬೇಡ್ಕರ್-ರಾಮನಿಗೆ ಜಾಗ ಸಿಗುತ್ತೆ. ಜೈನರ ಮನೆಯಲ್ಲಿ ರಾಮ, ಗಣಪತಿಗೆ ಜಾಗ ಇದೆ. ಇಸ್ಲಾಮಿಗೆ ಪರಿವರ್ತನೆಯಾದ್ರೆ ಅಂಬೇಡ್ಕರ್, ಬುದ್ಧನಿಗೂ ಜಾಗವಿಲ್ಲ.
ಗಾಂಧೀಜಿ ಇತಿಹಾಸ ಓದಿ : ಮತಾಂತರ ಮತಗಳ ಗಳಿಕೆಗೆ ಇರೋ ಸಾಧನ ಅಲ್ಲ. ಮತಾಂತರ ದೇಶಾಂತರಕ್ಕೆ ಸಮ ಅಂತಾ ಗಾಂಧೀಜಿ ಹೇಳಿದ್ರು. ಕಾಂಗ್ರೆಸ್ ನಮ್ದು ಗೋಡ್ಸೆ ಹಿಂದೂತ್ವ ಅಲ್ಲ, ಗಾಂಧಿ ಹಿಂದುತ್ವ ಅಂತಾರೆ. ಮತಾಂತರದ ಬಗ್ಗೆ ಗಾಂಧಿ ಏನು ಹೇಳಿದ್ರು ಅಂತಾ ಕಾಂಗ್ರೆಸ್ ಇತಿಹಾಸ ಓದಲಿ. ಸಿದ್ದರಾಮಯ್ಯನವರೇ ನೀವು ಒಮ್ಮೆ ಇತಿಹಾಸ ಓದಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಕಿಡಿ ಕಾರಿದರು.