ಕರ್ನಾಟಕ

karnataka

By

Published : Jul 7, 2020, 9:55 AM IST

ETV Bharat / state

ಆತಂಕ ಬೇಡ, ಶೀಘ್ರ ಸೋಂಕುಮುಕ್ತರಾಗಿ ಬರುವೆವು: ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್

ನನಗೆ ಹಾಗೂ ಪತ್ನಿಗೆ ಕೊರೊನಾ ಪಾಸಿಟಿವ್‌ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಈ ಕುರಿತು ಯಾರೂ ಆತಂಕಪಡಬೇಕಿಲ್ಲ. ಶೀಘ್ರ ಗುಣಮುಖರಾಗಿ ಬರುತ್ತೇವೆ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್ ತಿಳಿಸಿದ್ದಾರೆ,

MLC M.K Pranesh
ಎಂಎಲ್‌ಸಿ ಎಂ.ಕೆ.ಪ್ರಾಣೇಶ್‌

ಚಿಕ್ಕಮಗಳೂರು:ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಹಾಗೂ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಮತದಾರರು ಹಾಗೂ ಅಭಿಮಾನಿಗಳಿಗೆ ಜಿಲ್ಲಾ ಕೋವಿಡ್ ಅಸ್ಪತೆಯಿಂದಲೇ ವಿಶ್ವಾಸದ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

ಎಂಎಲ್‌ಸಿ ಎಂ.ಕೆ.ಪ್ರಾಣೇಶ್‌ ವಿಡಿಯೋ

ನಿಮ್ಮೆಲ್ಲರ ಪ್ರೀತಿ, ವಿಶ್ವಾಸದ ಮುಂದೆ ಕೊರೊನಾ ಸೋಂಕು ಏನೂ ಅಲ್ಲ. ನನಗೆ ಇದೊಂದು ಕಾಯಿಲೆ ಅಂತ ಅನ್ನಿಸುವುದಿಲ್ಲ. ಆದಷ್ಟು ಬೇಗ ಸೋಂಕುಮುಕ್ತರಾಗಿ ಹೊರಬರುತ್ತೇವೆ ಎಂದು ವಿಡಿಯೋ ಮುಖೇನ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಎಂ.ಕೆ. ಪ್ರಾಣೇಶ್ ಹಾಗೂ ಅವರ ಪತ್ನಿ ಇಬ್ಬರಲ್ಲೂ ಸೋಮವಾರ ಸೋಂಕು ಪತ್ತೆಯಾಗಿತ್ತು.

ABOUT THE AUTHOR

...view details