ಕರ್ನಾಟಕ

karnataka

ETV Bharat / state

VIDEO... ಚಿಕ್ಕಮಗಳೂರಲ್ಲಿ 2 ಗುಂಪಿನ ಯುವಕರ ನಡುವೆ ಮಾರಾಮಾರಿ - ಯುವಕರ ನಡುವೆ ಮಾರಾಮಾರಿ

ಚಿಕ್ಕಮಗಳೂರು ಜಿಲ್ಲೆಯ ಐ.ಜಿ ರಸ್ತೆಯಲ್ಲಿ 2 ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Clash Between two youth groups  in chikkamagaluru
ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ

By

Published : Nov 26, 2021, 2:08 PM IST

ಚಿಕ್ಕಮಗಳೂರು:ನಗರದಲ್ಲಿ ಪುಂಡರ ದಾಂಧಲೆ ಮಿತಿ ಮೀರಿ ಹೋಗುತ್ತಿದೆ. ನಗರದ ಹೃದಯಭಾಗ ಐ.ಜಿ ರಸ್ತೆಯಲ್ಲಿ 2 ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಸೌಟು, ಬಾಂಡ್ಲಿ, ಸೌದೆ, ಕುರ್ಚಿಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಚಿಕ್ಕಮಗಳೂರಲ್ಲಿ ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ

ಪೊಲೀಸರ ಭಯವಿಲ್ಲದೇ ರೌಡಿಗಳಂತೆ ರಸ್ತೆ ಮಧ್ಯೆದಲ್ಲಿ ಪುಂಡರ ಬಡಿದಾಟ ನೋಡಿ ಜನರು ದಂಗಾಗಿದ್ದಾರೆ. ಯಾವ ಕಾರಣಕ್ಕಾಗಿ ಪುಂಡರು ಈ ರೀತಿ ಹೊಡೆದಾಡಿಕೊಂಡಿದ್ದಾರೆ, ಎಂಬುದು ತಿಳಿದು ಬಂದಿಲ್ಲ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ನೀರು ಪಾಲಾದ ನಾಲ್ವರು ವಿದ್ಯಾರ್ಥಿಗಳು: ಮೂವರ ಮೃತದೇಹ ಪತ್ತೆ, ಓರ್ವನಿಗಾಗಿ ಮುಂದುವರಿದ ಶೋಧ

ABOUT THE AUTHOR

...view details