ಚಿಕ್ಕಮಗಳೂರು:ಕೆರೆಯಲ್ಲಿ ಈಜಲು ಹೋದ ಐವರು ಯುವಕರು ನೀರುಪಾಲಾಗಿದ್ದರು. ಕೊನೆಗೂ ಐದೂ ಯುವಕರ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ.
ಕೆರೆಯಲ್ಲಿ ಈಜಲು ಹೋದ ಐದು ಯುವಕರು ಸಾವನ್ನಪ್ಪಿದ್ದು, ಚಿಕ್ಕಮಗಳೂರು ತಾಲೂಕಿನ ವಸ್ತಾರೆಯ ಹಿರೇಕೆರೆಯಲ್ಲಿ ಈ ಘಟನೆ ನಡೆದಿದೆ. ಈ ಐವರು ಯುವಕರಲ್ಲಿ ಇಬ್ಬರು ಸ್ಥಳೀಯ ನಿವಾಸಿಗಳಾಗಿದ್ದು, ಇನ್ನು ಮೂವರು ಯುವಕರು ಬೀಗರ ಊಟಕ್ಕೆ ಬಂದವರಾಗಿದ್ದಾರೆ. ರಘು (22), ದಿಲೀಪ್ (24), ಸಂದೀಪ್ (23), ದೀಪಕ್ (25), ಸುದೀಪ್ (22) ಕೆರೆಯಲ್ಲಿ ಈಜಲು ಹೋದ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ.