ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನಲ್ಲಿ ಮುಂದುವರೆದ ವರುಣನ ಅಬ್ಬರ: ವಿಶ್ವವಿದ್ಯಾಲಯದ ರಸ್ತೆ ಕುಸಿತ - ಚಿಕ್ಕಮಗಳೂರು ಪ್ರವಾಹ ಸುದ್ದಿ

ರಾತ್ರಿಯಿಡೀ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪೇಚಿಗೆ ಸಿಲುಕಿದ್ದರು. ರಾತ್ರಿಯಿಡೀ ಮನೆಯಿಂದ ನೀರು ಹೊರಹಾಕಲು ಜನ ಹರಸಾಹಸಪಟ್ಟರು.

ವಿಶ್ವವಿದ್ಯಾಲಯದ ರಸ್ತೆ ಕುಸಿತ

By

Published : Oct 6, 2019, 12:35 PM IST

Updated : Oct 6, 2019, 12:41 PM IST

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕೆಲವೆಡೆ ಅವಾಂತರ ಸೃಷ್ಟಿಯಾಗಿದೆ. ಭಾರಿ ಮಳೆಯಿಂದ ನಗರದ ವಿಶ್ವವಿದ್ಯಾಲಯದ ಮುಂದಿನ ರಸ್ತೆ ಕುಸಿದಿದೆ.

ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪೇಚಿಗೆ ಸಿಲುಕಿದ್ದರು. ರಾತ್ರಿಯಿಡೀ ಮನೆಯಿಂದ ನೀರು ಹೊರಹಾಕಲು ಜನ ಹರಸಾಹಸಪಟ್ಟರು. ಮಲೆನಾಡು ಭಾಗದ ಕಳಸ ಹಾಗೂ ಹೊರನಾಡು ಪ್ರದೇಶದಲ್ಲಿ ಮಳೆ ಜೋರಾಗಿದ್ದು, ಜನ ಆತಂಕಗೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಳೆಯ ಅವಾಂತರ
Last Updated : Oct 6, 2019, 12:41 PM IST

ABOUT THE AUTHOR

...view details