ಕರ್ನಾಟಕ

karnataka

By

Published : Jun 15, 2019, 8:37 AM IST

ETV Bharat / state

ಮನೆ ಮುಂದೆ ಕೋಳಿ, ನಿಂಬೆಹಣ್ಣು, ಅರಿಶಿಣ, ಕುಂಕುಮ: ವಾಮಾಚಾರ ಶಂಕೆ

ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದ ಮನೆಯೊಂದರ ಮುಂದೆ ಕೋಳಿ, ನಿಂಬೆಹಣ್ಣು, ಅರಿಶಿಣ, ಕುಂಕುಮ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿದ್ದು, ವಾಮಾಚಾರ ಮಾಡಿದ್ದಾರೆ ಎಂದು ಮನೆಯ ಮಾಲೀಕರು ವಾಮಾಚಾರ ವ್ಯಕ್ತಪಡಿಸಿದ್ದಾರೆ.

ಮನೆಯ ಮುಂಭಾಗದಲ್ಲಿ ವಾಮಾಚಾರ ಶಂಕೆ

ಚಿಕ್ಕಮಗಳೂರು:ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದ ಮನೆಯೊಂದರ ಮುಂದೆ ಕಿಡಿಗೇಡಿಗಳು ಮಧ್ಯರಾತ್ರಿ ವೇಳೆ ವಾಮಾಚಾರ ಮಾಡಿದ್ದಾರೆ ಎಂದು ಮನೆಯ ಮಾಲೀಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಮಾವ್ಯಾಸೆಯ ದಿನದಂದೇ ಗ್ರಾಮದ ರಾಜಮ್ಮ ಎನ್ನುವರ ಮನೆಯ ಮುಂಭಾಗದಲ್ಲಿ ಕೋಳಿ, ನಿಂಬೆಹಣ್ಣು, ಅರಿಶಿಣ, ಕುಂಕುಮ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿದ್ದು, ಜಮೀನು ವ್ಯಾಜ್ಯದ ಹಿನ್ನೆಲೆ ಮನೆಯ ಮಾಲೀಕರ ವಿರುದ್ಧ ವಾಮಾಚಾರ ಮಾಡಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಮನೆಯ ಮುಂಭಾಗದಲ್ಲಿ ವಾಮಾಚಾರ ಶಂಕೆ

ವಾಮಾಚಾರ ಮಾಡಿ ಕೋಳಿಯನ್ನು ಸ್ಥಳದಲ್ಲಿಯೇ ಬಲಿಕೊಟ್ಟು, ನಂತರ ಅದರ ತಲೆಯನ್ನು ತೆಗೆದುಕೊಂಡು ಹೋಗಿದ್ದು, ಮಿಕ್ಕ ಎಲ್ಲಾ ವಸ್ತುಗಳನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಈ ವಿಚಾರ ಮನೆಯವರ ಗಮನಕ್ಕೆ ಬಂದಿದ್ದು ವಾಮಾಚಾರ ಮಾಡಿದವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಜಾಗವನ್ನು ಸ್ವಚ್ಚ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details