ಚಿಕ್ಕಮಗಳೂರು:ಪಿಯು ಪರೀಕ್ಷೆಯ ವೇಳೆ ಮಂಗಳೂರಿನಲ್ಲಿ ಒಂದಿಬ್ಬರು ಹುಡುಗಿಯರು ಹಿಜಬ್ಗಾಗಿ ಪರೀಕ್ಷೆಯನ್ನೇ ಬಹಿಷ್ಕರಿಸಿದ್ದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ. 99% ಜನ ಹೈಕೋರ್ಟ್ ಆದೇಶವನ್ನು ಪಾಲಿಸಿ ಸಮವಸ್ತ್ರ ಧರಿಸಿಕೊಂಡು ಬಂದು ಪರೀಕ್ಷೆ ಬರೆದಿದ್ದಾರೆ. 1% ಜನರು ಮಾತ್ರ ವಿವಾದವನ್ನು ಜೀವಂತವಾಗಿಡಲು ಮತ್ತೆ ಹಿಜಬ್ ಗಲಾಟೆ ಎಬ್ಬಿಸಿದ್ದಾರೆ ಎಂದರು.
ಹಿಜಬ್ ಬೇಕೆಂದು ಕೇಳುವ ಜನರು ನಾಟಕ ಮಾಡುತ್ತಿದ್ದಾರೆ. ಕ್ಯಾಮೆರಾ ಕಂಡರೆ ಸಾಕು ಅವರು ಈ ರೀತಿಯ ನಾಟಕ ಶುರು ಮಾಡುತ್ತಾರೆ. ಸಮಾಜದಲ್ಲಿ ಹೀರೋ, ಹೀರೋಯಿನ್ ಆಗಲು ಮುಂದಾಗಿದ್ದಾರೆ. ನಮಗೆ ಹಿಜಬ್ ದೊಡ್ಡದೋ, ಪರೀಕ್ಷೆ ದೊಡ್ಡದೋ. ಹಿಜಬ್ ಬೇಕೆಂದವರು ಪರೀಕ್ಷೆ ಬರೆದಿಲ್ಲ ಎಂದು ಹೇಳಿದರು.