ಚಿಕ್ಕಮಗಳೂರು: ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ ಉದ್ಯಮಿ ಜಿ.ವಿ. ಸಿದ್ಧಾರ್ಥ್ ಅವರ ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಕಾಫಿ ಡೇನ ಎಲ್ಲ ವ್ಯವಹಾರಗಳು ಇಂದು ಸ್ಥಗಿತಗೊಂಡಿವೆ.
ಚಿಕ್ಕಮಗಳೂರಿನಲ್ಲಿ ಕಾಫಿ ಡೇಗೆ ಸಂಬಂಧಿಸಿದ ವ್ಯವಹಾರಗಳು ಇಂದು ಸ್ಥಗಿತ, ಕಾರ್ಮಿಕರಿಗೆ ರಜೆ
ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಒಡೆತನದ ಕಾಫಿ ಡೇಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳು ಚಿಕ್ಕಮಗಳೂರಿನಲ್ಲಿ ಇಂದು ಸ್ಥಗಿತವಾಗಿವೆ. ಕೆಲಸಕ್ಕೆ ಬಂದ ಕಾರ್ಮಿಕರನ್ನು ವಾಪಸ್ ಕಳುಹಿಸಲಾಗುತ್ತಿದೆ.
ಕಾಫಿ ಡೇ ಸ್ಥಗಿತ
ಪ್ರತಿಷ್ಠಿತ ಎಬಿಸಿ ಕಂಪನಿ ಸೇರಿದಂತೆ ದಿ ಸೆರಾಯ್ ರೆಸಾರ್ಟ್,ಅಂಬರ್ ವ್ಯಾಲಿ ರೆಸಿಡೆಸ್ಸಿಯಲ್ ಸ್ಕೂಲ್,ವಿ ,ಟಿ ಸಿ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.ಇಂದು ಕೆಲಸಕ್ಕಾಗಿ ಬರುತ್ತಿರುವಂತಹ ನೂರಾರು ಕಾರ್ಮಿಕರನ್ನು ವಾಪಸ್ ಕಳುಹಿಸಲಾಗುತ್ತಿದೆ.