ಕರ್ನಾಟಕ

karnataka

ETV Bharat / state

ಹುಟ್ಟಿದಾಗಿನಿಂದಲೂ ಶಾಲಾ-ಕಾಲೇಜು ಮೆಟ್ಟಿಲೇರದೆ ಪಿಯುಸಿ ಪಾಸ್​ ಮಾಡಿದ ಬಾಲಕಿ - ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ದೀಪಿಕಾ

ತನ್ನಂತೆ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ತನ್ನ ತಂಗಿಗೂ ತಾನೇ ಪಾಠ ಮಾಡುತ್ತಿದ್ದಾಳೆ. ಹೆತ್ತವರು ಕೂಡ ಕಳೆದ 20 ವರ್ಷಗಳಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಕ್ಕಳನ್ನು ಯಾವುದೇ ಕೀಳಿರಿಮೆ ಬಾರದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳುತ್ತಿದ್ದಾರೆ..

ಬಾಲಕಿ ದೀಪಿಕಾ

By

Published : Sep 25, 2021, 4:32 PM IST

ಚಿಕ್ಕಮಗಳೂರು :ಅಪರೂಪದ ಕಾಯಿಲೆಗೆ ತುತ್ತಾಗಿ ಶಾಲಾ-ಕಾಲೇಜು ಮುಖ ನೋಡದ ಬಾಲಕಿಯೋರ್ವಳು ಮನೆಯಲ್ಲೇ ಓದಿ ಕಲಿತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಜಿಲ್ಲೆಯ ಎನ್​​ಆರ್​ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅರಳಿಕೊಪ್ಪ ಗ್ರಾಮದ ಸುಧಾಕರ್-ಪ್ರತಿಮಾ ದಂಪತಿ ಪುತ್ರಿ ದೀಪಿಕಾ ಸಾಧನೆ ಮಾಡಿರುವ ಬಾಲಕಿ. ಈಕೆ ಕೋಟಿ ಜನರಲ್ಲೊಬ್ಬರಿಗೆ ಬರುವ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದರೂ ಮನೆಯಲ್ಲೇ ಕುಳಿತು ವ್ಯಾಸಂಗ ಮಾಡುತ್ತಿದ್ದಳು.

ಈ ಬಾಲಕಿ ಹುಟ್ಟಿದಾಗಿನಿಂದ ಯಾವುದೇ ಶಾಲಾ-ಕಾಲೇಜಿಗೆ ಹೋಗಿಲ್ಲ. ಯಾವ ಶಿಕ್ಷಕರ ಪಾಠವನ್ನು ಕೇಳಿಲ್ಲ. ಯಾವ ಟ್ಯೂಷನ್‍ಗೂ ಹೋಗಿಲ್ಲ. ತಾನೇ ಓದಿ, ತನ್ನ ಗ್ರಹಿಕಾ ಶಕ್ತಿಯಿಂದ ಮೊದಲ ಪ್ರಯತ್ನದಲ್ಲೇ ಪಿಯುಸಿ ಪರೀಕ್ಷೆಯನ್ನು ಪಾಸ್​ ಮಾಡಿದ್ದಾಳೆ.

ಕಳೆದೆರಡು ವರ್ಷದ ಹಿಂದೆ ಸರ್ಕಾರ ಖಾಸಗಿಯಾಗಿ ನಡೆಸಿದ್ದ ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲೂ ಕೂಡ ಉತ್ತೀರ್ಣಳಾಗಿದ್ದಾಳೆ. ಓದಿನ ಜೊತೆಗೆ ಚಿತ್ರಕಲೆ,ಎಂಬ್ರಾಯಿಡರಿಂಗ್, ಕಂಪ್ಯೂಟರ್ ಜೊತೆ ಟೇಲರಿಂಗ್ ಕೂಡ ಮಾಡಿದ್ದಾಳೆ.

ತನ್ನಂತೆ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ತನ್ನ ತಂಗಿಗೂ ತಾನೇ ಪಾಠ ಮಾಡುತ್ತಿದ್ದಾಳೆ. ಹೆತ್ತವರು ಕೂಡ ಕಳೆದ 20 ವರ್ಷಗಳಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಕ್ಕಳನ್ನು ಯಾವುದೇ ಕೀಳಿರಿಮೆ ಬಾರದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳುತ್ತಿದ್ದಾರೆ.

ಓದಿ ದೊಡ್ಡವಳಾಗಿ ತನ್ನಂತೆ ಅಪರೂಪದ ಖಾಯಿಲೆಯಿಂದ ಬಳಲುವವರ ಸೇವೆ ಮಾಡಬೇಕೆಂಬ ಆಸೆ ದೀಪಿಕಾಳದ್ದಾಗಿದೆ. ಹೆತ್ತವರು ಕೂಡ ಮಗಳಿಗೆ ಯಾವುದಾದರೂ ಒಂದು ಕೆಲಸ ಸಿಕ್ಕರೆ ಅವಳ ಜೀವನಕ್ಕೂ ಸಹಕಾರಿಯಾಗಲಿದೆ. ಜೊತೆಗೆ ನಮಗೂ ತುಸು ನೆಮ್ಮದಿ ಸಿಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ವಿಚಾರ : ಸರ್ಕಾರಕ್ಕೆ ಗಡುವು ನೀಡಿದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ

ABOUT THE AUTHOR

...view details