ಕರ್ನಾಟಕ

karnataka

By

Published : Jul 18, 2020, 8:20 PM IST

ETV Bharat / state

ಚಿಕ್ಕಮಗಳೂರಿನಲ್ಲಿ 24 ಕೊರೊನಾ ಪಾಸಿಟಿವ್ ಪತ್ತೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು 24 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 250 ಕ್ಕೆ ಏರಿಕೆಯಾಗಿದೆ.

24 Corona Positive Detection in Chikmagalur
ಚಿಕ್ಕಮಗಳೂರಿನಲ್ಲಿ 24 ಕೊರೊನಾ ಪಾಸಿಟಿವ್ ಪತ್ತೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು 24 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 250 ಕ್ಕೆ ಏರಿಕೆಯಾಗಿದೆ. ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಇಂದು ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಒಟ್ಟು 130 ಜನರು ಗುಣಮುಖರಾಗಿದ್ದಾರೆ.

ಚಿಕ್ಕಮಗಳೂರು ತಾಲೂಕಿನಲ್ಲಿ 09, ತರೀಕೆರೆ ತಾಲೂಕಿನಲ್ಲಿ 03, ಕಡೂರು ತಾಲೂಕಿನಲ್ಲಿ 01, ಎನ್ಆರ್​​​ಪುರ ತಾಲೂಕಿನಲ್ಲಿ 03, ಕೊಪ್ಪ ತಾಲೂಕಿನಲ್ಲಿ 07, ಅಜ್ಜಂಪುರದಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 7 ಮಂದಿ ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರಿನಲ್ಲಿ 24 ಕೊರೊನಾ ಪಾಸಿಟಿವ್ ಪತ್ತೆ

ಈ ದಿನ ಪತ್ತೆಯಾದ ಸೋಂಕಿತರು ವಾಸ ಮಾಡುತ್ತಿದ್ದ ಏರಿಯಾವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣವಾಗಿ ಸೀಲ್​​ಡೌನ್ ಮಾಡಿ ಕಟ್ಟೆಚ್ಚರ ವಹಿಸಿದೆ. ಒಟ್ಟು 113 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details