ಚಿಕ್ಕಮಗಳೂರು:ವ್ಯಕ್ತಿಯೋರ್ವ ನಿತ್ಯ ಮಾನಸಿಕ ಕಿರುಕುಳ ನೀಡುತ್ತಿದ್ದ ಕಾರಣ ಬಾಲಕಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ನಡೆದಿದೆ.
ಪೂರ್ಣಿಮ (16) ಮೃತ ಬಾಲಕಿ. ಈಕೆ ಶಾಲೆಗೆ ಹೋಗುವ ವೇಳೆ ರಂಗನಾಥ್ ಶೆಟ್ಟಿ ಎಂಬ ಆರೋಪಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಮನೆಯಲ್ಲಿ ಈ ವಿಷಯ ತಿಳಿಸಿದ್ರೂ ಪ್ರಯೋಜನವಾಗದ ಕಾರಣ ಬಾಲಕಿ ನೊಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.