ಗುಡಿಬಂಡೆ: ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಬಾಪೂಜಿ ನಗರದಲ್ಲಿ ನಡೆದಿದೆ.
ಕೌಟುಂಬಿಕ ಕಲಹ: ಗೃಹಿಣಿ ಅತ್ಮಹತ್ಯೆ - women suicide
ಕೌಟುಂಬಿಕ ಕಲಹ ಹಿನ್ನೆಲೆ ಬಾಪೂಜಿ ನಗರದ ನಿವಾಸಿ ಸುಮಬಾಯಿ (40) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅತ್ಮಹತ್ಯೆ
ಬಾಪೂಜಿ ನಗರದ ನಿವಾಸಿ ಸುಮಬಾಯಿ (40) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪತಿ ಮಂಜುನಾಥಸಿಂಗ್ ಮಧ್ಯ ಕೌಟುಂಬಿಕ ವಿಚಾರದಲ್ಲಿ ಕಲಹ ಉಂಟಾಗಿದ್ದು, ಸೋಮುವಾರ ಮುಂಜಾನೆ ಪತಿ ಕೆಲಸ ನಿಮಿತ್ತ ಹೊರಗೆ ಹೋಗಿದ್ದು ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಪತ್ನಿ ನೇಣು ಹಾಕಿಕೊಂಡಿರುವುದು ತಿಳಿದು ಬಂದಿದೆ.
ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಗೆ ವಿಚಾರ ತಿಳಿಸಿದ್ದು, ಅತ್ಮಹತ್ಯೆ ಪ್ರಕರಣ ಕೇಸು ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ದೇಹವನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ. ಮೃತಪಟ್ಟ ಮಹಿಳೆಗೆ ಮಕ್ಕಳು ಇಲ್ಲವೆಂದು ಸಿಐ ಮಂಜುನಾಥ ತಿಳಿಸಿದ್ದಾರೆ.