ಚಿಕ್ಕಬಳ್ಳಾಪುರ:ಒಂದೇ ಕುಟುಂಬದ 9 ಮಂದಿಯ ಮೇಲೆ ಗ್ರಾಮಸ್ಥರೇ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕತ್ತರಿಗುಪ್ಪೆ ಗ್ರಾಮದಲ್ಲಿ ನಡೆದಿದೆ.
ಕತ್ತರಿಗುಪ್ಪೆ ಗ್ರಾಮದ ಶ್ರೀನಿವಾಸ್, ಹೆಂಡತಿ ವೀಣಾ, ಮಕ್ಕಳಾದ ತನುಶ್ರೀ, ತೇಜಸ್ವಿ, ನವ್ಯಾಶ್ರೀ, ಪಲ್ಲವಿ, ತಮ್ಮ ಸಾಮಿ ಶೇಖರ್, ತಾಯಿ ಯಲ್ಲಮ್ಮ, ಸಂಧ್ಯಾ ಮೇಲೆ ಅದೇ ಗ್ರಾಮದ ಕೆಲ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಗೊಳಗಾದವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಶ್ರೀನಿವಾಸ್ ಕುಟುಂಬದ ವೆಂಕಟಸ್ವಾಮಿ ಎಂಬ ವ್ಯಕ್ತಿ ಕಳೆದ 3 ದಿನಗಳ ಹಿಂದೆ ಮೃತಪಟ್ಟಿದ್ದರು. ಇದರಿಂದ ನೊಂದು ಶ್ರೀನಿವಾಸ್ ಕುಡಿದ ಮತ್ತಿನಲ್ಲಿ ಗ್ರಾಮದ ಕೆಲವರನ್ನು ಬೈದಿದ್ದರು. ಸದ್ಯ ಇದೇ ವಿಚಾರವಾಗಿ ಗ್ರಾಮದ ಕೆಲವು ಜನರು ಹಲ್ಲೆ ನಡೆಸಿದ್ದಾರೆ ಎಂದು ಶಂಕಿಸಲಾಗುತ್ತಿದೆ.
ಈ ಘಟನೆ ಕುರಿತು ಚಿಂತಾಮಣಿ ಗ್ರಾಮಾಂತರ ಠಾಣೆಗೆ ದೂರು ನೀಡಿರುವುದಾಗಿ ಶ್ರೀನಿವಾಸ್ ತಿಳಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದು, ಹಲ್ಲೆ ನಡೆಸಿದ್ದಾದರೂ ಯಾಕೆ?. ಹಲ್ಲೆ ಮಾಡಿದ್ದಾದರೂ ಯಾರು ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.