ಚೇಳೂರು:ಒಂದೆಡೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಮತ್ತೂಂದೆಡೆ ವಿವಿಧ ರೋಗಕ್ಕೆ ಟೊಮೆಟೊ, ಬದನೆ, ಕ್ಯಾರೆಟ್ ಬೆಳೆಗಳು ನೆಲಕಚ್ಚಿದ್ದು, ಗಡಿ ಭಾಗದ ರೈತರು ಕಂಗಾಲಾಗಿದ್ದಾರೆ.
ಹೂಜಿ ನೊಣದ ಕಾಟಕ್ಕೆ ನೆಲ ಕಚ್ಚಿದ ಟೊಮೆಟೊ: ಕಂಗಾಲಾದ ರೈತರು - ಟೊಮೇಟೋ ಬೆಲೆ ಇಳಿಕೆ
ಚೇಳೂರು ತಾಲೂಕಿನಲ್ಲಿ ಹೂಜಿ ನೊಣದ ಕಾಟಕ್ಕೆ ಟೊಮೆಟೊ ಬೆಳೆ ನೆಲಕಚ್ಚಿದ್ದು ರೈತರು ಕಂಗಾಲಾಗಿದ್ದಾರೆ.
ಅಲ್ಲದೇ, ಇದರ ನಡುವೆ ಪದೇ ಪದೆ ಹೂಜಿ ನೊಣದ ಕಾಟಕ್ಕೆ ಟೊಮೆಟೊ ಮಣ್ಣು ಪಾಲಾಗುತ್ತಿದ್ದು ರೈತರ ನಿದ್ದೆಗೆಡಿಸಿದೆ. 2 ಎಕರೆ ಭೂಮಿಯಲ್ಲಿ ಬದನೆಕಾಯಿ ಬೆಳೆದು ₹ 3 ಲಕ್ಷ, 2 ಎಕರೆ ಕ್ಯಾರೆಟ್ ಬೆಳೆದು ₹2 ಲಕ್ಷ ಮತ್ತು ಟೊಮೆಟೊಗೆ ಹೂಜಿ ನೊಣ ಬಾಧೆಯಿಂದ ₹1 ಲಕ್ಷ ನಷ್ಟವಾಗಿದೆ ಎಂದು ಪ್ರಗತಿಪರ ರೈತ ರಾಗಿಮಾಕಲಪಲ್ಲಿ ಆರ್.ವಿ.ಪ್ರಭಾಕರರೆಡ್ಡಿ ನೋವು ವ್ಯಕ್ತಪಡಿಸಿದರು.
ಚೇಳೂರು ತಾಲ್ಲೂಕಿನಲ್ಲಿ ಸುಮಾರು 2 ಸಾವಿರ ಹೆಕ್ಟೇರ್‌ನಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ವರ್ಷಕ್ಕೆ ₹25 ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತದೆ. ಆರು ತಿಂಗಳಿಂದ ಟೊಮೆಟೊ ಬೆಲೆ ಕುಸಿಯುತ್ತಲೇ ಇದೆ. ನೀರಿಲ್ಲದ ಸಮಯದಲ್ಲೂ ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳೆ ಬೆಳೆದಿದ್ದೆನೇ ಆದರೆ ಈಗ ಟೊಮೆಟೊ ಬೆಲೆ ಕೇಳುವವರೇ ಇಲ್ಲದಂತಾಗಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಟೊಮೆಟೊ ಮಾರುಕಟ್ಟೆ ಮುಚ್ಚಬೇಕಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.