ಗುಡಿಬಂಡೆ:ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಲು ಸಂಬಂಧಪಟ್ಟ ವಕೀಲರು ಹಾಗೂ ಪ್ರಾಧಿಕಾರದ ಮುಖ್ಯಸ್ಥರು ವೃತ್ತಿ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ನ್ಯಾಯಾಂಗದ ಮೌಲ್ಯಗಳನ್ನು ಎತ್ತಿಹಿಡಿಯಬೇಕೆಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್‍ಕುಮಾರ್ ತಿಳಿಸಿದರು.
ನ್ಯಾಯಾಧೀಕರಣದ ಮೇಲೆ ವಿಶ್ವಾಸ ಹೆಚ್ಚಿಸ ಬೇಕು-ಹೈಕೋರ್ಟ್ ನ್ಯಾಯ ಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್
ಗುಡಿಬಂಡೆ ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯ ಉದ್ಘಾನೆ ಸಮಾರಂಭದಲ್ಲಿ ಭಾಗವಹಿಸಿದ್ದ ವಕೀಲರನ್ನು ಉದ್ದೇಶಿಸಿ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್‍ಕುಮಾರ್ ಹಲವಾರು ಸಲಹೆ-ಸೂಚನೆ ನೀಡಿ ಕಿವಿಮಾತುಗಳನ್ನಾಡಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಲಾಜಿಸಗಿದ್ದಹಿರಿಯ ಶ್ರೇಣಿ ನ್ಯಾಯಾಲಯ ಉದ್ಘಾನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಲ್ಲಿನ ನ್ಯಾಯಾಂಗದ ಇತಿಹಾಸದಲ್ಲಿ ಇಂದಿನ ಕ್ಷಣ ಒಂದು ಮೈಲಿಗಲ್ಲಾಗಿದೆ. ಎಲ್ಲರ ಪರಿಶ್ರಮದಿಂದ ಇಲ್ಲಿಗೆ ಹಿರಿಯಶ್ರೇಣಿ ನ್ಯಾಯಾಲದ ಪೀಠ ಮಂಜೂರಾಗಿದೆ, ಇದರ ಜೊತೆಗೆ ವಕೀಲರ ಜವಾಬ್ಧಾರಿ ಕೂಡ ಹೆಚ್ಚಾಗಿದೆ ಎಂದರು.
ಅಷ್ಟೇಅಲ್ಲದೆತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು ಉತ್ತಮ ಸಾಧನೆ ಮಾಡಲು ಯುವ ವಕೀಲ ಸಮುದಾಯಕ್ಕೆ ದೊರೆತಿರುವ ಅವಕಾಶ ಇದಾಗಿದ್ದು, ಅಧ್ಯಯನಾಶೀಲರಾಗುವ ಮೂಲಕ ನಂಬಿ ಬರುವ ಕಕ್ಷಿದಾರರರಿಗೆ ನ್ಯಾಯಾಧಿಕರಣದ ಮೇಲೆ ವಿಶ್ವಾಸ ಹೆಚ್ಚಾಗುವಂತೆ ಮಾಡುವ ಜವಾಬ್ಧಾರಿ ಸಹಾ ತಮ್ಮ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.