ಚಿಕ್ಕಬಳ್ಳಾಪುರ : ಕ್ಯಾಂಟರ್ ವಾಹನ ಹರಿದು ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ಸುಮಂಗಲಿ ಕಲ್ಯಾಣ ಮಂಟಪದ ಬಳಿ ಬ್ರಿಡ್ಜ್ ಮೇಲೆ ನಡೆದಿದೆ.
ಬ್ಯಾಂಕಿಗೆ ಹೋಗುತ್ತಿದ್ದ ವೇಳೆ ಎದುರಾದ ಜವರಾಯ... ಕ್ಯಾಂಟರ್ ಹರಿದು ಪತ್ನಿ ಸಾವು, ಪತಿಗೆ ಗಾಯ - Gauribidanur latest news
ಕ್ಯಾಂಟರ್ ವಾಹನ ಹರಿದು ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ಮಹಿಳೆ ಸಾವು
ಗಂಗಸಂದ್ರ ಗ್ರಾಮದ ಮಮತಾ (26) ಸಾವನ್ನಪ್ಪಿದ ಮಹಿಳೆ ಎಂದು ತಿಳಿದು ಬಂದಿದೆ. ಪತಿ ಗಂಗರಾಜು ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಂಗಸಂದ್ರ ಗ್ರಾಮದಿಂದ ಟಿವಿಎಸ್ ಎಕ್ಸ್ಎಲ್ ವಾಹನದಲ್ಲಿ ಬ್ಯಾಂಕಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಗೌರಿಬಿದನೂರು ಪಿಎಸ್ಐ ಚಂದ್ರಕಲಾ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.