ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಾಳಮಾಚನಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ಹಿಂಡು ಮಂಗಳವಾರ ತಡರಾತ್ರಿ ಸುಮಾರು 10 ಕುರಿಗಳನ್ನು ಸಾಯಿಸಿವೆ.
ಬೀದಿ ನಾಯಿಗಳ ದಾಳಿಗೆ 10 ಕುರಿಗಳು ಬಲಿ - kannadanews
ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಕಡೆ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಸುಮಾರು 10 ಕುರಿಗಳನ್ನು ಬಲಿ ಪಡೆದಿವೆ.
ರೈತ ದೋಬಿ ಮುನಿಯಪ್ಪ ಎಂಬುವವರಿಗೆ ಸೇರಿದ ಈ 10 ಕುರಿಗಳ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿವೆ. ಮಂಗಳವಾರ ತಡರಾತ್ರಿ ಮುನಿಯಪ್ಪ ಮನೆಯ ಪಕ್ಕದ ಶೆಡ್ನಲ್ಲಿ ಕುರಿಗಳು ತಂಗಿದ್ದವು. ಈ ವೇಳೆ ಬೀದಿ ನಾಯಿಗಳು ಕುರಿಗಳ ಮೇಲೆ ದಾಳಿ ನಡೆಸಿ ಕಚ್ಚಿ ಕಚ್ಚಿ ಸುಮಾರು 10 ಕುರಿಗಳನ್ನು ಸಾಯಿಸಿವೆ. ಗ್ರಾಮದಲ್ಲಿ ನಾಯಿಗಳು ಹೀಗೆ ಕುರಿ ಮತ್ತು ಮೇಕೆಗಳ ಮೇಲೆ ದಾಳಿ ನಡೆಸುತ್ತಿದ್ದರೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಬೀದಿ ನಾಯಿಗಳನ್ನು ಹಿಡಿಯುತ್ತಿಲ್ಲ.
ಕುರಿ, ಮೇಕೆ ಸಾಕಾಣಿಕೆಯಿಂದಲೇ ಜೀವನ ನಡೆಸುತ್ತಿರುವ ರೈತರು ಇದೀಗ ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಸದಸ್ಯ ಭೈರೇಗೌಡ ಆಗ್ರಹಿಸಿದ್ದಾರೆ.