ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಲೋಕ ಸಭೆ ಚುನಾವಣಾ ಅಭ್ಯರ್ಥಿಗಳ ಟೆಂಪಲ್ ರನ್ ಮುಂದುವರೆದಿದೆ, ಅಭ್ಯರ್ಥಿಗಳು ಗೆಲುವಿಗಾಗಿ ದೇವರ ಮೊರೆ ಹೋಗುತ್ತಿದ್ದು, ಪೂಜೆ ಪುನಸ್ಕಾರ ಮುಂದುವರೆಸಿದ್ದಾರೆ. ಇತ್ತ ವೀರಪ್ಪ ಮೊಯ್ಲಿ ಸಹ ನಾಮಪತ್ರ ಸಲ್ಲಿಕೆಯ ದಿನ ಟೆಂಪಲ್ ರನ್ ಮುಂದುವರೆಸಿದ್ದಾರೆ.
ಲೋಕ ಅಭ್ಯರ್ಥಿಗಳ ಟೆಂಪಲ್ ರನ್.. ಶುಭಗಳಿಗೆಗೆ ಕಾದು ಕುಳಿತು ದರ್ಶನ ಪಡೆದ ವೀರಪ್ಪ ಮೊಯ್ಲಿ - kannada newspaper
ಲೋಕ ಸಭೆ ಚುನಾವಣಾ ಅಭ್ಯರ್ಥಿಗಳ ಟೆಂಪಲ್ ರನ್ ಮುಂದುವರೆದಿದ್ದು, ವೀರಪ್ಪ ಮೊಯ್ಲಿ ಸಹ ನಾಮಪತ್ರ ಸಲ್ಲಿಕೆಯ ದಿನ ಟೆಂಪಲ್ ರನ್ ಮಾಡಿದ್ದಾರೆ.
ದೇವರ ದರ್ಶನ ಪಡೆದ ವೀರಪ್ಪ ಮೊಯ್ಲಿ
ಬೆಳಗ್ಗೆ 8 ರ ಸಮಯಕ್ಕೆ ನಂದಿ ಬೆಟ್ಟದ ತಪ್ಪಲಿನ ಭೋಗ ನಂದೀಶ್ವರ ದೇವಸ್ಥಾನಕ್ಕೆ ಬೇಟಿ ನೀಡಿದ್ದು, ಶುಭಗಳಿಗೆಗಾಗಿ ಕಾದು ಕುಳಿತು 9 ಗಂಟೆಯ ನಂತರ ದೇವರ ದರ್ಶನ ಪಡೆದಿದ್ದಾರೆ. ಇನ್ನೂ ಇದೇ ವೇಳೆ ಕೃಷಿ ಸಚಿವ ಶಿವಶಂಕರ್ ರೆಡ್ಡಿ ,ಎಂಟಿ ಬಿ ನಾಗರಾಜ್,ಸ್ಥಳೀಯ ಶಾಸಕ ಸುಧಾಕರ್, ದೊಡ್ಡಬಳ್ಳಾಪುರ ಶಾಸಕ ವೆಂಕಟರಾಮಯ್ಯ ವೀರಪ್ಪ ಮೊಯ್ಲಿಗೆ ಸಾಥ್ ನೀಡಿದರು.
ನಂದಿ ಬೆಟ್ಟದ ಭೋಗನಂದಿಶ್ವರ ದೇವಸ್ಥಾನ ಸೇರಿದಂತೆ ದರ್ಗಾ ಪ್ರವೇಶಿಸಿ ದೇವರ ಮೊರೆ ಹೋದರು.