ಚಿಕ್ಕಬಳ್ಳಾಪುರ:ಶಾಸಕ ಡಾ. ಕೆ. ಸುಧಾಕರ್ಗೆ ಕೊನೆಗೂ ನಿಗಮ ಮಂಡಳಿ ದೊರಕ್ಕಿದ್ದು, ಬೆಂಬಲಿಗರು ಹಾಗೂ ಕಾರ್ಯಕರ್ತರು ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ನಿಗಮ ಮಂಡಳಿ ನೀಡದಿದ್ದಕ್ಕೆ ಈ ಹಿಂದೆ ಸಿಎಂ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದ ಸುಧಾಕರ್ ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದು, ಬಿಜೆಪಿಗೆ ಸೇರುವ ಶಾಸಕರ ಪಟ್ಟಿಯಲ್ಲಿ ಕೂಡ ಅವರ ಹೆಸರು ಕೇಳಿಬಂದಿತ್ತು. ಆದರೆ ಇದೀಗ ಸಿಎಂ ಹೆಚ್ಡಿಕೆ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದ್ದಾರೆ.
ಡಾ. ಕೆ. ಸುಧಾಕರ್ ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಇನ್ನೂ ಈ ಹಿಂದೆ ಪುಟಗೋಸಿ ನಿಗಮ ಮಂಡಳಿ ಯಾವನಿಗೆ ಬೇಕು ಎಂದಿದ್ದ ಶಾಸಕ ಸುಧಾಕರ್, ಸಚಿವ ಸ್ಥಾನಕ್ಕೂ ಬೇಡಿಕೆ ಇಟ್ಟಿದ್ದರು. ಆದರೆ, ಕೊನೆಗೂ ನಿಗಮ ಮಂಡಳಿ ಸ್ಥಾನವನ್ನು ನೀಡಿ, ದೊಸ್ತಿ ಸರ್ಕಾರ ಶಾಸಕ ಸುಧಾಕರರನ್ನು ಸಾಮಾಧಾನಗೊಳಿಸಿದೆ. ಸದ್ಯ ಇದರ ಸಲುವಾಗಿಯೇ ಶಾಸಕ ಟ್ವಿಟರ್ನಲ್ಲಿ ಸಂತಸವನ್ನು ಹಂಚಿಕೊಂಡಿದ್ದು, ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಪರಮೇಶ್ವರ್ ಹಾಗೂ ರಾಹುಲ್ ಗಾಂಧಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಟ್ವೀಟ್ ಮಾಡಿದ ಶಾಸಕ ಡಾ. ಸುಧಾಕರ್.ಕೆ ಇನ್ನೂ ಈ ವಿಚಾರ ಶಾಸಕರ ಬೆಂಬಲಿಗರಿಗೆ ಮತ್ತಷ್ಟು ಸಂತೋಷವನ್ನು ತಂದಿದ್ದು, ನಗರದ ಶಿಡ್ಲಘಟ್ಟ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಾಚಾರಣೆ ನಡೆಸಿದರು.