ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ. ಸುಧಾಕರ್ರನ್ನ ಮಣಿಸಲು ಜಿಲ್ಲೆಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಒಂದಾಗಿದ್ದಾರೆ. ಈ ನಿಟ್ಟಿನಲ್ಲಿ ನಗರದ ಹೊರ ವಲಯದ ಜಿಹೆಚ್ ಎನ್ ಕನ್ವೆಷನ್ ಹಾಲ್ನಲ್ಲಿ ಸಮಾವೇಶವನ್ನೂ ನಡೆಸಿದ್ದಾರೆ.
ನಗರದ ಹೊರವಲಯದ ಕನ್ವೆಷನ್ ಹಾಲ್ನಲ್ಲಿ ಮಾಜಿ ಕೃಷಿ ಸಚಿವ ಶಿವಶಂಕರರೆಡ್ಡಿ, ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ, ನಾಲ್ವರು ಮಾಜಿ ಶಾಸಕರು ಸೇರಿದಂತೆ ಕೈ ಘಟಾನುಘಟಿ ನಾಯಕರು ಸಮಾವೇಶದಲ್ಲಿ ಭಾಗಿಯಾಗಿ ಅನರ್ಹ ಶಾಸಕನನ್ನು ಸೋಲಿಸಲು ಕಾರ್ಯತಂತ್ರ ರೂಪಿಸಿದ್ದಾರೆ.
ಅನರ್ಹ ಶಾಸಕ ಸುಧಾಕರ್ ಗೆ ಮಣಿಸಲು ಕೈ ಶಾಸಕರು-ಕಾರ್ಯಕರ್ತರಿಂದ ಕಾರ್ಯತಂತ್ರ ಡಾ ಕೆ. ಸುಧಾಕರ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆ ವೇಳೆ ಬೆಂಬಲ ಸೂಚಿಸದೇ ಇದ್ದ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ಸ್ಪೀಕರ್ ಅವರಿಂದ ಅನರ್ಹತೆ ಶಿಕ್ಷೆಗೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರದ ಕೈ ಶಾಸಕರು ಅನರ್ಹ ಶಾಸಕರ ಬದಲಿಗೆ ಅಭ್ಯರ್ಥಿಯ ಆಯ್ಕೆಗೆ ಮುಂದಾಗಿದೆ. ಸುಧಾಕರ್ ರನ್ನು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸೋಲಿಸಲು ಜಿಲ್ಲೆಯ ಕೈ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯತಂತ್ರ ಹೆಣೆದಿದ್ದಾರೆ.
ಸದ್ಯ ಬಿಜೆಪಿಯಲ್ಲಿಯೂ ಅಸಮಧಾನ ಶುರುವಾಗಿದ್ದು, ಯಾವ ಸಂದರ್ಭದಲ್ಲಾದ್ರು ಉಪ ಚುನಾವಣೆ ಬರಬಹುದು. ಅದಕ್ಕಾಗಿಯೇ ನಾವು ಚುನಾವಣೆಗೆ ಸಿದ್ಧರಾಗುತ್ತಿದ್ದೇವೆಂದು ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ತಿಳಿಸಿದ್ದಾರೆ.