ಕರ್ನಾಟಕ

karnataka

ETV Bharat / state

ಲೋಕ ಸಮರ ಬಳಿಕ ಸಮ್ಮಿಶ್ರ ಸರ್ಕಾರ ಬಿದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಶ್ರೀರಾಮುಲು ಭವಿಷ್ಯ - ಪ್ರಚಾರ

ಮೋದಿ ಸರ್ಕಾರದಲ್ಲಿ ಈ ಕ್ಷೇತ್ರದಿಂದ ಗೆದ್ದು ಬಚ್ಚೇಗೌಡರು ಲೋಕಸಭೆಗೆ ಹೋಗಬೇಕು ಎಂದ ಶ್ರೀರಾಮುಲು, ಈ ಕ್ಷೇತ್ರದಲ್ಲಿ ನೀರಿನ‌ ಸಮಸ್ಯೆ, ಉದ್ಯೋಗ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಇವೆ. ಇದರ ಕುರಿತು ನಮಗೆ ಪತ್ರವನ್ನು ನೀಡಿದ್ದು, ಇದನ್ನು ನಮ್ಮ ಸರ್ಕಾರ ಬಂದ ಬಳಿಕ ಬಗೆಹರಿಸುತ್ತೇವೆ ಎಂದರು.

ಶ್ರೀರಾಮುಲು

By

Published : Apr 11, 2019, 11:08 PM IST

ಬೆಂಗಳೂರು:ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸ್ಟಾರ್ ಪ್ರಚಾರ ಕೂಡ ಜೋರಾಗೆ ನಡೆಯುತ್ತಿದೆ. ಅದೇ ರೀತಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಪರ ಭರ್ಜರಿ ಪ್ರಚಾರ ನಡೆಯುತ್ತಿದೆ. ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತಯಾಚನೆ ಮಾಡಿದ್ರೆ, ಇಂದು ಶ್ರೀರಾಮುಲು ಮತಬೇಟೆಯಾಡಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಗೌರಿಬಿದನೂರು ಮತ್ತು ಚಿಂತಾಮಣಿಯಲ್ಲಿ ಮತಯಾಚನೆ ಮಾಡಿದ ಬಳಿಕ ದೇವನಹಳ್ಳಿಗೆ ಬಂದು ಬಚ್ಚೇಗೌಡರ ಪರ ಪ್ರಚಾರ ಮಾಡಿದ್ರು. ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು, ಲೋಕಸಭೆ ಚುನಾವಣೆ ಬಳಿಕ ರಾಜ್ಯದ ಸಮ್ಮಿಶ್ರ ಸರ್ಕಾರ ಬಿದ್ದು, ಬಿಜೆಪಿ ಅಧಿಕಾರಕ್ಕೆ‌ ಬರುತ್ತದೆ. ಇಡೀ ದೇಶದ ಜನರೆಲ್ಲಾ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು‌ ಬಯಸುತ್ತಿದ್ದಾರೆ. ಅದೇ ರೀತಿ ಇಡೀ ವಿಶ್ವವೇ ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸಬೇಕು ಎಂದು ಬಯಸುತ್ತಿದೆ. ಆದರೆ ಒಂದು ದೇಶ ಮಾತ್ರ ಮೋದಿ ಗೆಲ್ಲಬಾರದು ಎಂದು ಭಾವಿಸುತ್ತಿದೆ ಎಂದು ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದರು.

ಶ್ರೀರಾಮುಲು ಪ್ರಚಾರ

ಮೋದಿ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆಯುಷ್ಮಾನ್​ ಭಾರತ್​ ಯೋಜನೆ ಸೇರಿ ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮೋದಿ ಸರ್ಕಾರದಲ್ಲಿ ಈ ಕ್ಷೇತ್ರದಿಂದ ಗೆದ್ದು ಬಚ್ಚೇಗೌಡರು ಲೋಕಸಭೆಗೆ ಹೋಗಬೇಕು ಎಂದ ಅವರು, ಈ ಕ್ಷೇತ್ರದಲ್ಲಿ ನೀರಿನ‌ ಸಮಸ್ಯೆ, ಉದ್ಯೋಗ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಇವೆ. ಇದರ ಕುರಿತು ನಮಗೆ ಪತ್ರವನ್ನು ನೀಡಿದ್ದು, ಇದನ್ನು ನಮ್ಮ ಸರ್ಕಾರ ಬಂದ ಬಳಿಕ ಬಗೆಹರಿಸುತ್ತೇವೆ ಎಂದರು.

ಇದೇ ವೇಳೆ ಮಾತನಾಡಿದ ಬಚ್ಚೇಗೌಡ, ಇಂದು ದೇಶ ಇಷ್ಟೊಂದು ಅಭಿವೃದ್ಧಿ ಹೊಂದಿದೆ ಎಂದರೆ ಅದಕ್ಕೆ ಮೋದಿ ಕಾರಣ. ಇಡೀ‌ ವಿಶ್ವವೇ ಭಾರತ ಕಂಡರೆ‌ ಭಯ ಪಡುತ್ತಿದೆ. ಅದಕ್ಕೆ ಕಾರಣ ಭಾರತದ ಬಲಿಷ್ಠ ಸೈನ್ಯ. ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೀವಿ. ಅದಕ್ಕೆ ಕಾರಣ ಮೋದಿ. ಅಮೆರಿಕಾ, ಇಸ್ರೇಲ್​ ಬಿಟ್ಟರೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಭಾರತ ಮಾತ್ರ. ಮತ್ತೊಮ್ಮೆ ಮೋದಿ ಪ್ರಧಾನಿ ಆದರೆ ಭಾರತ ವಿಶ್ವದಲ್ಲೇ ನಂಬರ ಒನ್ ಸ್ಥಾನದಲ್ಲಿರುತ್ತದೆ. ಆದ್ದರಿಂದ ಎಲ್ಲರೂ ಬಿಜೆಪಿಗೆ ಮತ ನೀಡುವ ‌ಮೂಲಕ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡಬೇಕು ಎಂದರು.

ABOUT THE AUTHOR

...view details