ಚಿಕ್ಕಬಳ್ಳಾಪುರ/ಬಾಗೇಪಲ್ಲಿ: ದೇವಮಾನವ ಪುಟ್ಟಪರ್ತಿ ಶ್ರೀ ಸತ್ಯ ಸಾಯಿ ಬಾಬಾರ 9ನೇ ವರ್ಷದ ಪುಣ್ಯತಿಥಿ ಹಿನ್ನೆಲೆ ಮೂರು ಸಾವಿರ ಜನರಿಗೆ ಅನ್ನದಾಸೋಹ ಹಾಗೂ ದಿನಸಿ ಕಿಟ್ ವಿತರಿಸಲಾಗಿದೆ. ಲಾಕ್ಡೌನ್ನಿಂದಾಗಿ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ತೀವ್ರ ಸಮಸ್ಯೆ ಎದುರಾಗಿದ್ದು, ಅಗತ್ಯ ವಸ್ತುಗಳು ದೊರೆಯದೆ ಚಿಂತೆಗೀಡಾಗಿದ್ದಾರೆ.
ಪುಟ್ಟಪರ್ತಿ ಶ್ರೀ ಸತ್ಯ ಸಾಯಿಬಾಬಾರ ಪುಣ್ಯತಿಥಿ: 3 ಸಾವಿರ ಜನರಿಗೆ ದಿನಸಿ ವಿತರಣೆ
ಕೊರೊನಾ ಲಾಕ್ಡೌನ್ ಹಿನ್ನೆಲೆ ಹಲವರಿಗೆ ಅಗತ್ಯ ವಸ್ತು ಕೊಳ್ಳುವುದೇ ಸಮಸ್ಯೆಯಾಗಿಬಿಟ್ಟಿದೆ. ಹೀಗಾಗಿ ಸಾಕಷ್ಟು ಸಂಘ-ಸಂಸ್ಥೆಗಳು ಕಾರ್ಮಿಕರು, ಬಡವರಿಗೆ ನಿತ್ಯ ಆಹಾರ ಪೂರೈಸುವ ಕೆಲಸ ಮಾಡುತ್ತಿವೆ. ಬಾಗೇಪಲ್ಲಿ ತಾಲೂಕು ಶ್ರೀ ಸತ್ಯ ಸಾಯಿಬಾಬಾ ಟ್ರಸ್ಟ್ ವತಿಯಿಂದ ಸಮಾಜ ಸೇವಕರು ಹಾಗೂ ವಕೀಲರಾದ ಶ್ರೀನಿವಾಸ ರೆಡ್ಡಿ ಬಡವರಿಗೆ ಕಿಟ್ ವಿತರಿಸುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಈ ಹಿನ್ನೆಲೆ ಬಾಬಾರ 9ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಸಾಯಿಬಾಬಾ ಟ್ರಸ್ಟ್ ವತಿಯಿಂದ ಸಮಾಜ ಸೇವಕರು ಹಾಗೂ ವಕೀಲರಾದ ಶ್ರೀನಿವಾಸ ರೆಡ್ಡಿ ಬಡವರಿಗೆ ಕಿಟ್ ವಿತರಿಸಿದರು. ಬಳಿಕ ಸೇವಕ ವೈ.ಎ.ಶ್ರೀನಿವಾಸ ರೆಡ್ಡಿ ಮಾತನಾಡಿ, ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದು, ಬಾಗೇಪಲ್ಲಿಯಲ್ಲಿ ಗಡಿ ತಾಲೂಕಿನ ನಿರಾಶ್ರಿತರು ಹಾಗೂ ನಿರ್ಗತಿಕರು ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ.
ಈ ಹಿನ್ನೆಲೆ ಯಾರೂ ಕೂಡ ಹಸಿವಿನಿಂದ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಸದುದ್ದೇಶದಿಂದ ಹಾಗೂ ದೇವ ಮಾನವ, ಪವಾಡ ಪುರುಷ ಪುಟ್ಟಪರ್ತಿ ಶ್ರೀ ಸತ್ಯ ಸಾಯಿ ಬಾಬಾರ 9ನೇ ವರ್ಷದ ಪುಣ್ಯತಿಥಿ ಪ್ರಯುಕ್ತ ಸುಮಾರು ಮೂರು ಸಾವಿರ ಜನರಿಗೆ ಅನ್ನ ದಾಸೋಹ ಹಾಗೂ ದಿನಸಿ ಕಿಟ್ ವಿತರಣೆ ಮಾಡಿ ಈ ಅಳಿಲು ಸೇವೆ ಮಾಡುತ್ತಿದ್ದೇವೆ ಎಂದರು.