ಕರ್ನಾಟಕ

karnataka

ETV Bharat / state

ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಆರೋಪ

ಮಿನಕಿನಗುರ್ಕಿ ಗ್ರಾಮ ಪಂಚಾಯತಿಯ ಮೈಲಾಗನಹಳ್ಳಿ ಗ್ರಾಮದ ಸರ್ವೆ ನಂ 441 ನರಸಿಂಹ ಮೂರ್ತಿ ಎಂಬ ರೈತ ತನ್ನ ಕೃಷಿ ಜಮೀನಿಗೆ ಬೆಟ್ಟದ ಮೇಲಿಂದ ಬರುತ್ತಿದ್ದ ಮಳೆ ನೀರನ್ನು ತಡೆಯಲು ಬೇರೆ ಕಾಲುವೆ ಮಾಡುತ್ತಿದ್ದ. ಆಗ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಜೆಸಿಬಿ ಮತ್ತು ಎರಡು ಟ್ಯಾಂಕರ್ ಗಳನ್ನು ವಶಕ್ಕೆ ಪಡೆದುಕೊಂಡು ಮೊಕದ್ದಮೆ ದಾಖಲಿಸಿದ್ದಾರೆ.

ಅರಣ್ಯ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ
ಅರಣ್ಯ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ

By

Published : Jul 22, 2020, 1:47 PM IST

ಚಿಕ್ಕಬಳ್ಳಾಪುರ: ಮಳೆ ನೀರು ಬೆಟ್ಟದ ಮೇಲಿಂದ ಗದ್ದೆಗೆ ಬರುವುದನ್ನು ತಪ್ಪಿಸಲು ಜೆಸಿಬಿ ಮೂಲಕ ಬೇರೊಂದು ಮಾರ್ಗವನ್ನು ಸೃಷ್ಟಿಸಿದ ರೈತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ‌ ಮೈಲಗಾನಹಳ್ಳಿ ಬಳಿ ನಡೆದಿದೆ.

ಅರಣ್ಯ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ

ಮಂಚೇನಹಳ್ಳಿ ಹೋಬಳಿ ಮಿನಕಿನಗುರ್ಕಿ ಗ್ರಾಮ ಪಂಚಾಯತಿಯ ಮೈಲಾಗನಹಳ್ಳಿ ಗ್ರಾಮದ ಸರ್ವೆ ನಂ 441 ನರಸಿಂಹ ಮೂರ್ತಿ ಎಂಬ ರೈತ ತನ್ನ ಕೃಷಿ ಜಮೀನಿಗೆ ಬೆಟ್ಟದ ಮೇಲಿಂದ ಬರುತ್ತಿದ್ದ ಮಳೆ ನೀರನ್ನು ತಡೆಯಲು ಬೇರೆ ಕಾಲುವೆ ಮಾಡುತ್ತಿದ್ದ. ಈ ವೇಳೆ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಜೆಸಿಬಿ ಮತ್ತು ಎರಡು ಟ್ಯಾಂಕರ್ ಗಳನ್ನು ವಶಕ್ಕೆ ಪಡೆದುಕೊಂಡು ಮೊಕದ್ದಮೆ ದಾಖಾಲಿಸಿದ್ದಾರೆ.

ರೈತ ಸಂಘ ಅರಣ್ಯ ಇಲಾಖೆ ಅಧಿಕಾರಿಗಳ ದೋರಣೆಯನ್ನು ಖಂಡಿಸಿ ನಗರದ ಅರಣ್ಯ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ರೈತರ ಮೇಲೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಿ ವಶಪಡಿಸಿಕೊಂಡಿರುವ ವಾಹನಗಳನ್ನು ಬಿಡುಗಡೆ ಮಾಡಬೇಕು ಮತ್ತೆ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಮೂಹಿಕ ನಾಯಕತ್ವದ ತಾಲೂಕು ಅಧ್ಯಕ್ಷ ಲೋಕೇಶ್ ಗೌಡ ಅಧಿಕಾರಿಗಳಗೆ ಎಚ್ಚರಿಕೆ ನೀಡಿದರು.

ತಾಲೂಕಿನಲ್ಲಿ ಸಾವಿರಾರು ಉದ್ಯಮಿಗಳು ಅರಣ್ಯವನ್ನು ನಾಶಪಡಿಸುತ್ತಿದ್ದರೂ ಸಹ ಇಲ್ಲಿನ ಅರಣ್ಯ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ ರೈತರ ಮೇಲೆ ಮಾತ್ರ ಮೊಕದ್ದಮೆ ದಾಖಲಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಅವರ ಗಮನಕ್ಕೆ ತರಲಾಗುವುದು ಎಂದರು.

ABOUT THE AUTHOR

...view details