ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನವಾಗಿದೆ. ಒಟ್ಟು 2284 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಸದ್ಯ ಮತ ಎಣಿಕೆಯ ದಿನಕ್ಕೆ ಲೆಕ್ಕ ಶುರುಮಾಡಿದ್ದಾರೆ.
ಬಿರು ಬಿಸಿಲಿನ ನಡುವೆಯೂ ಮತದಾನ ನಡೆಸಿದ ಹಿರಿಯ ನಾಗರಿಕರು...
ನ್ನೆ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು. ಮತದಾನ ಆರಂಭಗೊಂಡಾಗಿನಿಂದಲೂ ಅಂಗವಿಕಲರು, ಹಿರಿಯ ನಾಗರಿಕರು ಸೇರಿದಂತೆ ಮೊದಲ ಬಾರಿ ಮತಹಾಕಲು ಬಂದ ಯುವಜನತೆ ಉತ್ಸಾಹದಿಂದ ಬಿಸಿಲನ್ನೂ ಲೆಕ್ಕಿಸದೆ ಮತವನ್ನು ಚಲಾವಣೆ ಮಾಡಿದರು. ಇನ್ನು ಹಿರಿಯ ನಾಗರಿಕರಿಗೆ ವೀಲ್ ಚೇರ್ ಹಾಗೂ ಆಟೋ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ ಚಿಕ್ಕಬಳ್ಳಾಪುರ ಹೃದಯಭಾಗದ ಮತಗಟ್ಟೆ 182ರ ನಗರಸಭೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತೆಯೊಬ್ಬರು ಕಮಲದ ರವಿಕೆ ತೊಟ್ಟು ಮತ ಚಲಾಯಿಸಿದರು.
ಅರ್ಧಗಂಟೆಗೂ ಅಧಿಕ ಕಾಲ ಕ್ಯೂನಲ್ಲಿ ನಿಂತು ಮೊಯ್ಲಿ ಮತದಾನ...