ಚಿಕ್ಕಬಳ್ಳಾಪುರ:ಹಿರಿಯೂರು ತಾಲೂಕಿನ ವಿವಿ ಸಾಗರದ ಬಳಿ ಇರುವ ಅಮ್ಮನಹಟ್ಟಿ ಗ್ರಾಮದಲ್ಲಿಯುವಕನೋರ್ವನ ಅನಾಥ ಶವ ಪತ್ತೆಯಾಗಿದೆ. ಅಕ್ರಮ ಮರಳು ದಂಧೆಕೋರರು ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹಿರಿಯೂರಿನಲ್ಲಿ ಅನಾಥ ಶವ ಪತ್ತೆ.. ಅಕ್ರಮ ಮರಳು ದಂಧೆಗೆ ಬಲಿಯಾದನೇ ಯುವಕ.. - ಅನಾಥ ಶವ ಪತ್ತೆ
ಯುವಕನೋರ್ವನ ಅನಾಥ ಶವ ಪತ್ತೆಯಾಗಿದ್ದು, ಅಕ್ರಮ ಮರಳು ದಂಧೆಕೋರರು ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿ ಸಾಗರದ ಬಳಿ ಇರುವ ಅಮ್ಮನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಿರೋ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಾರಿಕಣಿವೆ(ವಾಣಿವಿಲಾಸ ಸಾಗರ) ಸಮೀಪದ ಅಮ್ಮನಹಟ್ಟಿ ಗ್ರಾಮದ ಬಳಿ ರಾತ್ರಿ ವೇಳೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಿರೋದಾಗಿ ಸಾಕಷ್ಟು ಅನುಮಾನ ಮೂಡುತ್ತಿವೆ. ಅಮ್ಮನಹಟ್ಟಿ ಗ್ರಾಮದ ಯುವಕ ಶ್ರೀರಂಗ ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು, ವೇದಾವತಿ ನದಿಯ ಹಳ್ಳದಿಂದ ಮರಳು ಸಾಗಣೆ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಟ್ರ್ಯಾಕ್ಟರ್ನಲ್ಲಿದ್ದ ಮರಳನ್ನು ಪೊದೆ ಸಾಲಿನಲ್ಲಿ ಹಾಕಿದ ಬಳಿಕ ಟ್ರ್ಯಾಕ್ಟರ್ ಹತ್ತಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.ಮಾರಿಕಣಿವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಕೂಡ ದಾಖಲಿಸಿಕೊಂಡಿದ್ದಾರೆ.