ಕರ್ನಾಟಕ

karnataka

By

Published : Jan 31, 2020, 1:31 PM IST

ETV Bharat / state

ಕುಷ್ಠರೋಗದ ಬಗ್ಗೆ ಅರಿವು ಮೂಡಿಸಲು ಜಾಥಾ

ತಾಲೂಕು ಸಾರ್ವಜನಿಕ ಆಸ್ಪೆತ್ರೆಯಿಂದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಜಾಥ ನಡೆಸಲಾಯಿತು.

kn_ckb_01_kushta_roga_avb_kac10004
ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಜಾಥಾ, ಚಿಕ್ಕಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಆಯೋಜನೆ

ಚಿಕ್ಕಬಳ್ಳಾಪುರ: ತಾಲೂಕು ಸಾರ್ವಜನಿಕ ಆಸ್ಪೆತ್ರೆಯಿಂದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಜಾಥ ನಡೆಸಲಾಯಿತು.

ಗುಡಿಬಂಡೆ ಮುಖ್ಯ ರಸ್ತೆಗಳಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಆರೋಗ್ಯಾಧಿಕಾರಿ ನರಸಿಂಹಮೂರ್ತಿ ಚಾಲನೆ ನೀಡಿದರು. ಕುಷ್ಠರೋಗಿಗಳ ಬಗ್ಗೆ ತಾರತಮ್ಯ ತೋರದೆ, ನೋವಿನಿಂದ ಬಳಲುವ ಅವರನ್ನು ಮುಖ್ಯವಾಹಿನಿಗೆ ತಂದು ಸಾಮಾನ್ಯರೊಂದಿಗೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಜಾಥಾ
ತಾಲೂಕು ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ‘ಮಚ್ಚೆಗಳು ಇದ್ದರೆ ಮೈಯಲ್ಲಿ-ಮುಚ್ಚಿಡಬೇಡಿ ಮನದಲ್ಲಿ’, ‘ಕುಷ್ಠರೋಗದ ತ್ವರಿತ ಪತ್ತೆ ಶೀಘ್ರ ಚಿಕಿತ್ಸೆ’, ‘ಬನ್ನಿ ಕುಷ್ಠ ಮುಕ್ತ ದೇಶವನ್ನು ನಿರ್ಮಿಸೋಣ’ ಎಂಬ ಘೋಷ ವಾಕ್ಯಗಳನ್ನು ಪ್ರದರ್ಶಿಸುವ ಮೂಲಕ ಜನಜಾಗೃತಿ ಮೂಡಿಸಿದರು.

ABOUT THE AUTHOR

...view details