ಚಿಕ್ಕಬಳ್ಳಾಪುರ:ಕಲ್ಲು ಕ್ವಾರಿಯ ನೀರಿನಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಮತ್ತು ಮಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಹಾರೋಬಂಡೆ ಕಲ್ಲು ಕ್ವಾರಿಯಲ್ಲಿ ನಡೆದಿದೆ.
ಕಲ್ಲು ಕ್ವಾರಿ ಹೊಂಡದಲ್ಲಿ ಮುಳುಗಿ ತಾಯಿ, ಮಗಳು ಸಾವು - ಚಿಕ್ಕಬಳ್ಳಾಪುರ
ಬಟ್ಟೆ ತೊಳೆಯುವಾಗ ಕಲ್ಲು ಕ್ವಾರಿ ಹೊಂಡದಲ್ಲಿ ಮುಳುಗಿ ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಹಾರೋಬಂಡೆ ಬಳಿ ನಡೆದಿದೆ.
ಕಲ್ಲು ಕ್ವಾರಿ ಹೊಂಡದಲ್ಲಿ ಮುಳುಗಿ ತಾಯಿ ಮಗಳು ಸಾವು
ಹಾರೋಬಂಡೆ ಗ್ರಾಮದ ಚಿನ್ನಯ್ಯನ ಎರಡನೇ ಪತ್ನಿ ಪೂಜ (32) ಮತ್ತು ಮೊದಲ ಪತ್ನಿಯ ಮಗಳು ಮಂಜುಳ (9) ಇಂದು ಬೆಳಗ್ಗೆ ಗ್ರಾಮದ ಬಳಿಯಿರುವ 30 ಅಡಿಯ ಕಲ್ಲು ಕ್ವಾರಿಯ ಗುಂಡಿಯಲ್ಲಿ ಬಟ್ಟೆ ಒಗೆಯಲು ಹೋಗಿದ್ದರು. ಮಂಜುಳ ನೀರಿನಲ್ಲಿ ಮುಖ ತೊಳೆಯಲು ಹೋಗಿ ಮುಳುಗುತ್ತಿದ್ದಾಗ ರಕ್ಷಣೆಗೆ ಧಾವಿಸಿದ ಮಲತಾಯಿ ಪೂಜಾ ಸಹ ಮುಳುಗಿ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಮತ್ತು ಅಗ್ನಿ ಶಾಮಕದಳದವರು ಮೃತ ತಾಯಿ-ಮಗಳ ದೇಹಗಳನ್ನು ನೀರಿನಿಂದ ಹೊರ ತೆಗೆದು ಮರಣೋತ್ತರ ಪರಿಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.
Last Updated : Mar 10, 2021, 4:07 PM IST