ಕರ್ನಾಟಕ

karnataka

ETV Bharat / state

ಲಾರಿಗೆ ವೋಲ್ವೋ ಬಸ್ ಡಿಕ್ಕಿ.. 25ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ಲಾರಿಗೆ ವೋಲ್ವೋ ಬಸ್ ಡಿಕ್ಕಿ ಹೊಡೆದ ಪರಿಣಾಮ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

more-than-25-people-injured-in-lorry-bus-accident
ಲಾರಿಗೆ ವೋಲ್ವೋ ಬಸ್ ಡಿಕ್ಕಿ.. 25ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

By

Published : May 6, 2022, 3:33 PM IST

ಚಿಕ್ಕಬಳ್ಳಾಪುರ:ಲಾರಿಗೆ ವೋಲ್ವೋ ಬಸ್ ಡಿಕ್ಕಿ ಹೊಡೆದ ಪರಿಣಾಮ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ‌ ಘಟನೆ ನಗರದ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ 44ರ ಮಂಚನಬಲೆ ಗೇಟ್ ಬಳಿ ಸಂಭವಿಸಿದೆ.

ಹೈದರಾಬಾದ್​​ನಿಂದ ಬೆಂಗಳೂರಿಗೆ ಬರುತ್ತಿದ್ದ ಕಲ್ಲಡ ಟ್ರಾವೆಲ್ಸ್​ನ ಬಸ್ ಮಂಚನಬಲೆಯಿಂದ ಬಂದು ಹೆದ್ದಾರಿಗೆ ತಿರುಗಿಸುತ್ತಿದ್ದ ಲಾರಿಗೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಓಲ್ವೋ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಲಾರಿಗೆ ಡಿಕ್ಕಿ ಹೊಡೆದ ವೋಲ್ವೋ ಬಸ್

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮಕ್ಕಳಿಗೆ ವಿಷವುಣಿಸಿ, ಆತ್ಮಹತ್ಯೆಗೆ ಶರಣಾದ ದಂಪತಿ; ಲಾಡ್ಜ್​ನಲ್ಲಿ ನಾಲ್ವರ ಶವ ಪತ್ತೆ

ABOUT THE AUTHOR

...view details