ಚಿಕ್ಕಬಳ್ಳಾಪುರ :ಕಳ್ಳತನ ಪ್ರಕರಣದಲ್ಲಿ ಎರಡು ಬಾರಿ ಜೈಲು ವಾಸ ಅನುಭವಿಸಿದ್ದ ವ್ಯಕ್ತಿಯೋರ್ವ ಕೊರೊನಾ ಪಾಸಿಟಿವ್ ವರದಿ ಬಂದ ಬಳಿಕ ನೇಣಿಗೆ ಶರಣಾಗಿರುವ ಘಟನೆ ಗೌರಿಬಿದನೂರು ತಾಲೂಕಿನ ಹಿರೇಬಿದನೂರು ಬಳಿಯ ಉತ್ತರ ಪಿನಿಕಿನಿ ನದಿ ಭಾಗದಲ್ಲಿ ನಡದಿದೆ.
ತಾಲೂಕಿನ ವೇದಲವೇಣಿ ಗ್ರಾಮದ ಶಿವಾನಂದ (24) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಮೃತ ವ್ಯಕ್ತಿ ದ್ವಿಚಕ್ರ ವಾಹನ ಕಳ್ಳತನದ ಆರೋಪದಲ್ಲಿ 2 ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ.
ಇದೇ ತಿಂಗಳು 20ರಂದು ಗೌರಿಬಿದನೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್ ವರದಿ ಬಂದ ಮೇಲೆ ಸೋಂಕಿತ ವ್ಯಕ್ತಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.