ಚಿಕ್ಕಬಳ್ಳಾಪುರ:ಒಂದು ಕಡೆ ಲೋಕ ಸಮರಕ್ಕೆ ಬಿಜೆಪಿ ನಾಯಕರು ಸಾಕಷ್ಟು ಕಸರತ್ತು ಮಾಡುತ್ತಿದ್ದರೆ, ಇನ್ನೊಂದೆಡೆ 7 ಬಾರಿ ಜಯಶೀಲರಾಗಿ 8ನೇ ಬಾರಿಗೆ ಇತಿಹಾಸ ಸೃಷ್ಟಿಸಲು ಹೊರಟಿರುವ ಕೆ.ಹೆಚ್.ಮುನಿಯಪ್ಪರಿಗೆ ಈ ಬಾರಿ ಲೋಕಸಭಾ ಚುನಾವಣೆ ಯಾವ ತಿರ್ಮಾನವನ್ನು ನೀಡಲಿದೆ ಎಂದು ಕ್ಷೇತ್ರದ ಜನತೆ ಬಹಳಷ್ಟು ಚರ್ಚೆ ನಡೆಸುತ್ತಿದ್ದಾರೆ.
ಸದ್ಯ ಕೆ.ಹೆಚ್.ಮುನಿಯಪ್ಪರಿಗೆ ಕೋಲಾರ ಲೋಕಸಭಾ ಕ್ಷೇತ್ರದ ಕೈ ನಾಯಕರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಶಾಸಕ ಮುನಿಯಪ್ಪ ಸೇರಿ ಸಾಕಷ್ಟು ನಾಯಕರು ಸೋಲಿನ ಖೆಡ್ಡಾ ತೋಡಿದ್ದಾರೆ. ನಿನ್ನೆಯಷ್ಟೇ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಎಂ.ಸಿ.ಸುಧಾಕರ್, ಟಿಕೆಟ್ ತಪ್ಪಿಸಲು ಕಳೆದ ಎರಡು ಬಾರಿ ಸಾಕಷ್ಟು ಶ್ರಮ ಪಟ್ಟಿರುವುದಾಗಿ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಆದರೆ, ಮುನಿಯಪ್ಪ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಮಾತ್ರ ಈ ಬಾರಿಯೂ ಮುನಿಯಪ್ಪರಿಗೆ ಗೆಲುವು ಶತಸಿದ್ಧವೆಂದು ಶಂಖ ಉದೂತ್ತಿದ್ದಾರೆ.
ಇದರ ಸಲುವಾಗಿಯೇ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಚಿಂತಾಮಣಿ ನಗರದಲ್ಲಿ ಮುನಿಯಪ್ಪ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಸಭೆ ಏರ್ಪಡಿಸಿದ್ದರು.