ಕರ್ನಾಟಕ

karnataka

By

Published : Feb 25, 2021, 10:08 AM IST

Updated : Feb 25, 2021, 12:46 PM IST

ETV Bharat / state

ಹಿರೇನಾಗವಲ್ಲಿ ಪ್ರಕರಣ ಬೆನ್ನಲ್ಲೇ ಚಿಕ್ಕನಾಗವಲ್ಲಿ ಕೆರೆಯಲ್ಲಿ ಸ್ಫೋಟಕ ಪತ್ತೆ!

ಚಿಕ್ಕನಾಗವಲ್ಲಿ ಕೆರೆಯ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕ ವಸ್ತುಗಳನ್ನು ದುಷ್ಕರ್ಮಿಗಳು ಎಸೆದಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಹಾಗೂ ಗುಡಿಬಂಡೆ ಪೊಲೀಸರು ‌ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

illegal gelatin sticks
ಸ್ಪೋಟಕ ಚಿಕ್ಕನಾಗವಲ್ಲಿ ಕೆರೆಯಲ್ಲಿ ಪತ್ತೆ

ಚಿಕ್ಕಬಳ್ಳಾಪುರ:ಹಿರೇನಾಗವಲ್ಲಿಯಲ್ಲಿ ಜಿಲಿಟಿನ್ ಸ್ಫೋಟ ದುರಂತದ ಬೆನ್ನಲ್ಲೇ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುಗಳನ್ನು ಕೆರೆಗೆ ಬಿಸಾಡಿರುವ ಘಟನೆ ತಾಲೂಕಿನ ಪೆರೆಸಂದ್ರ ಬಳಿಯ ಚಿಕ್ಕನಾಗವಲ್ಲಿ ಕೆರೆಯ ಬಳಿ ಪತ್ತೆಯಾಗಿದೆ.

ಹಿರೇನಾಗವಲ್ಲಿಯಲ್ಲಿ ಸಂಭವಿಸಿದ ಜಿಲೆಟಿನ್​ ಸ್ಫೋಟಕ್ಕೆ 6 ಮಂದಿ ಬಲಿಯಾಗಿದ್ದರು. ಈ ಘಟನೆ ನಡೆದ ಎರಡೇ ದಿನಕ್ಕೆ ಮುತಕದಹಳ್ಳಿ ಕೆರೆಯ ಬಳಿಯ ಕಾಲುವೆಯಲ್ಲಿ 393 ಜಲಿಟಿನ್ ಕಡ್ಡಿಗಳು ಸೇರಿದಂತೆ ಚೀಲದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಈಗಾಗಲೇ ಸ್ಥಳಕ್ಕೆ ಬಾಂಬ್ ಸ್ಕ್ವಾಡ್‌ ಸಿಬ್ಬಂದಿ ಭೇಟಿ ನೀಡಿ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿ ವಸ್ತುಗಳನ್ನು ಸಂಗ್ರಹಿಸಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಸ್ಫೋಟ ಆಗುವ ಭಯದಿಂದ ಜಿಲೆಟಿನ್​ಗಳನ್ನು ಬಿಸಾಡಿದ್ದಾರೆ ಎನ್ನಲಾಗ್ತಿದೆ. ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಹಾಗೂ ಗುಡಿಬಂಡೆ ಪೊಲೀಸರು ‌ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆರೆಯಲ್ಲಿ ಸ್ಫೋಟಕ ಪತ್ತೆಯಾಗಿರುವ ಕುರಿತು ಎಸ್​ಪಿ ಮಾಹಿತಿ

ಈ ಸಂಬಂಧ ಎಸ್​ಪಿ ಮಿಥುನ್ ಕುಮಾರ್ ಮಾತನಾಡಿ, ಹಿರೇನಾಗವಲ್ಲಿ ಕ್ವಾರಿ ಬಳಿ ಸ್ಫೋಟದ ನಂತರ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕಗಳನ್ನು ದುಷ್ಕರ್ಮಿಗಳು ಕೆರೆಯಲ್ಲಿ ಬಿಸಾಡಿ ಹೋಗಿದ್ದಾರೆ ಎಂದು ಮಾಹಿತಿ ನೀಡಿದರು.

Last Updated : Feb 25, 2021, 12:46 PM IST

ABOUT THE AUTHOR

...view details