ಚಿಕ್ಕಬಳ್ಳಾಪುರ :ಗೌರಿಬಿದನೂರು ತಾಲೂಕಿನ ಹೆಗ್ಗನಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಆಹಾರ ಸೇವಿಸಿದಾಗ ಮಕ್ಕಳಲ್ಲಿ ಅಲರ್ಜಿ ಸಮಸ್ಯೆ ಕಂಡು ಬರುತ್ತಿದ್ದು, ಪೋಷಕರು ಆತಂಕಕ್ಕೆ ಕಾರಣವಾಗಿದೆ.
ಮಂಚೇನಹಳ್ಳಿ ಹೋಬಳಿ ಜರಬಂಡನಹಳ್ಳಿ ಗ್ರಾಮ ಪಂಚಾಯುತಿ ಹೆಗ್ಗನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ 20 ಮಕ್ಕಳಿದ್ದು, ಈ ಪೈಕಿ 10 ಮಕ್ಕಳಲ್ಲಿ ಮೂರು ದಿನಗಳಿಗೊಮ್ಮೆ ಚರ್ಮದ ಮೇಲೆ ಗುಳ್ಳೆಗಳು ಮತ್ತು ಕೆಂಪು ಮಚ್ಚೆ ತುರಿಕೆ ಸೇರಿ ಹಲವು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ ಬಳಿಕ ಸಮಸ್ಯೆ ಪರಿಹಾರ ವಾಗುತ್ತದೆ ಮತ್ತೆ ಅಂಗನವಾಡಿ ಕೇಂದ್ರದಲ್ಲಿ ಆಹಾರ ಸೇವಿಸದಾಗ ಅಲರ್ಜಿ ಕಂಡು ಬರುತ್ತದೆ. ಇದಕ್ಕೆ ಕಲುಷಿತ ಆಹಾರ ಪದಾರ್ಥಗಳ ವಿತರಣೆ ಕಾರಣವೆಂದು ಪಾಲಕರು ಆರೋಪಿಸಿದ್ದಾರೆ.
ಸಂಬಂದ ಪಟ್ಟ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕೇಂದ್ರದಲ್ಲಿನ ಸಮಸ್ಯೆ ಬಗೆಹರಿಸಬೇಕು. ವೈದ್ಯರಿಂದ ಮಕ್ಕಳ ಅರೋಗ್ಯ ತಪಾಸಣೆ ಮಾಡಿಸಿ. ಅಲರ್ಜಿಯ ಕಾರಣ ತಿಳಿಸಬೇಕು ಇಲ್ಲದಿದ್ದಲ್ಲಿ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸುವುದಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.