ಚಿಕ್ಕಬಳ್ಳಾಪುರ:ಜಿಲ್ಲೆಯ ಗುಡಿಬಂಡೆ ತಾಲೂಕಿನ ತಿಮ್ಮೇನಹಳ್ಳಿ ಸಾಂಬ ಎಂಬುವರ ಮನೆಯ ಗೋಡೆ ಧಾರಾಕಾರ ಮಳೆಯಿಂದ ಕುಸಿದು ಬಿದ್ದಿದೆ.
ಅಡುಗೆ ಮಾಡುವಾಗಲೇ ಕುಸಿದ ಗೋಡೆ, ಅಪಾಯದಿಂದ ಪಾರಾದ ಕುಟುಂಬ - ಗುಡಿಬಂಡೆ ತಾಲೂಕಿನ ತಿಮ್ಮೇನಹಳ್ಳಿ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಿಮ್ಮೇನಹಳ್ಳಿ ಸಾಂಬ ಎಂಬುವರ ಮನೆಯ ಗೋಡೆ ಧಾರಾಕಾರ ಮಳೆಯಿಂದ ಕುಸಿದು ಬಿದ್ದಿದೆ.
ಮನೆಯಲ್ಲಿ ಅಡುಗೆ ಮಾಡುವ ಸಮ ಮಯದಲ್ಲಿನೆಯ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿ ಇರುವ ಮಕ್ಕಳು ಮತ್ತು ಮಹಿಳೆಯರು ಹೊರಗಡೆ ಓಡಿ ಬಂದಿದ್ದಾರೆ. ಅದೃಷ್ಟಶಾತ್ ಯಾರಿಗೂ ಏನು ಆಗಿಲ್ಲ.ಇನ್ನು ಘಟನೆ ಆದ ನಂತರ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು.
ಸಾಂಬ ಎಂಬುವರು ಸುಮಾರು ವರ್ಷಗಳಿಂದ ಉಚಿತ ನಿವೇಶನಕ್ಕೆ ಅರ್ಜಿ ಹಾಕಿದ್ದರು. ಆದರೆ ಮನೆ ಆಗಿರಲಿಲ್ಲ, ಸುಮಾರು ವರ್ಷಗಳಿಂದ ಹೆಂಚಿನ ಮನೆಯಲ್ಲಿ ವಾಸವಾಗಿದ್ದರು. ಆದರೆ ಇವತ್ತು ಧಾರಾಕಾರ ಮಳೆಯಿಂದ ಆ ಮನೆಯ ಗೋಡೆ ಕುಸಿದು ಬಿದ್ದಿದ್ದು, ಕುಟುಂಬ ಈಗ ಬೀದಿಗೆ ಬಿದ್ದಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.