ಕರ್ನಾಟಕ

karnataka

ETV Bharat / state

ಗಾಂಧಿ ಗ್ರಾಮ ಪುರಸ್ಕಾರಕ್ಕೆ ದೇವರಗುಡಿಪಲ್ಲಿ ಗ್ರಾ.ಪಂ ಆಯ್ಕೆ - Gandhi grama puraskar award

2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯತ್​ ಆಯ್ಕೆಯಾಗಿದೆ.

Gandhi Grammy Award for 2019-20
Gandhi Grammy Award for 2019-20

By

Published : Oct 11, 2020, 11:04 AM IST

ಬಾಗೇಪಲ್ಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನ ಹಾಗೂ ಉತ್ತಮ ಕಾರ್ಯ ಪ್ರಗತಿಗೆ 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯತ್​ ಆಯ್ಕೆಯಾಗಿದೆ.

ತಾಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ 21 ಹಳ್ಳಿಗಳ ಪೈಕಿ 9,338 ಜನರು ಇದ್ದಾರೆ. ಇದರಲ್ಲಿ ಪುರುಷರು 4,781, ಮಹಿಳೆಯರು 4,557 ಮಂದಿ ಇದ್ದಾರೆ. ಜೊತೆಗೆ 2,264 ಕುಟುಂಬಗಳಿವೆ. ಕಿರಿಯ ಪ್ರಾಥಮಿಕ ಶಾಲೆಗಳು 15, ಹಿರಿಯ 4, ಪ್ರೌಢಶಾಲೆ 1, ಅಂಗನವಾಡಿ ಕೇಂದ್ರಗಳು 18, ಖಾಸಗಿ ಶಾಲೆಗಳು 2, ಪ್ರಾಥಮಿಕ ಆರೋಗ್ಯಕೇಂದ್ರ 1, ನ್ಯಾಯಬೆಲೆ ಅಂಗಡಿ 6, ಕೊಳವೆಬಾವಿಗಳು 29 ಇದ್ದು, ಪ್ರಸಕ್ತ ವರ್ಷದ ಕಂದಾಯ ವಸೂಲಿ 6,47,816 ರೂ. ಸಂಗ್ರಹಿಸಲಾಗಿದೆ.

ಕಂದಾಯ, ಕರ ವಸೂಲಿಯಲ್ಲಿ ಶೇ 92ರಷ್ಟು ಪ್ರಗತಿ ಸಾಧಿಸಿದೆ. 14ನೇ ಹಣಕಾಸು ಯೋಜನೆಯಲ್ಲಿ ಮಂಜೂರಾಗಿದ್ದ 60 ಲಕ್ಷ ರೂ.ಗಳನ್ನು ಕಾರ್ಯಪ್ರಗತಿ ಮಾಡಲಾಗಿದೆ. ಪಂಚಾಯತ್​ ವ್ಯಾಪ್ತಿಯಲ್ಲಿ 14 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದೆ. 2,250 ಮನೆಗಳಲ್ಲಿ 1,077 ಮನೆಗಳಿಗೆ ನಲ್ಲಿ ವ್ಯವಸ್ಥೆ ಮಾಡಲಾಗಿದೆ. 290 ಬೀದಿ ದೀಪಗಳನ್ನು ಅಳವಡಿಸಲಾಗಿದೆ.

ಗುಂಡ್ಲಪಲ್ಲಿ, ಜಿಲಕರಪಲ್ಲಿ, ದೇವರಗುಡಿಪಲ್ಲಿ, ಕೊಂಡಂವಾರಿಪಲ್ಲಿ ಗ್ರಾಮಗಳ ಪಕ್ಕದಲ್ಲಿ 193 ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವ ಗುರಿ ಇದೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಅನುಷ್ಠಾನ, ಕಂದಾಯ ವಸೂಲಿ, ಹಣಕಾಸು ಯೋಜನೆ ಸದ್ಬಳಕೆ, ಕೆರೆ, ಕುಂಟೆ, ಕಟ್ಟೆಗಳ ಅಭಿವೃದ್ಧಿಗೆ ಮಾನದಂಡ ಆಧಾರವಾಗಿರಿಸಿ, 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯತಿಗೆ ಈ ಬಾರಿ ರಾಜ್ಯ ಗ್ರಾಮಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಆಯ್ಕೆ ಮಾಡಿದೆ.

ABOUT THE AUTHOR

...view details