ಕರ್ನಾಟಕ

karnataka

ETV Bharat / state

ಭೂ ಕಬಳಿಕೆ ಆರೋಪದಡಿ ಕೆ ಹೆಚ್ ಮುನಿಯಪ್ಪ ವಿರುದ್ದ ದೂರು ದಾಖಲು

ನಿರ್ಗತಿಕ ಎಂದು ನಾಲ್ಕು ಎಕರೆ ಜಮೀನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡಿದ್ದ ಮುನಿಯಪ್ಪ ಫ್ಯಾಮಿಲಿ ಬರೋಬ್ಬರಿ 410 ಎಕರೆ ಕಬಳಿಕೆ ಮಾಡಿದೆ ಎಂದು ಆರೋಪ ಮಾಡಿ ದೂರು ದಾಖಲಿಸಿದ್ದಾರೆ.

ಕೆ ಹೆಚ್ ಮುನಿಯಪ್ಪ ವಿರುದ್ದ ಭೂಕಬಳಿಕೆ ಆರೋಪದಡಿ ದೂರು

By

Published : Mar 17, 2019, 1:59 PM IST

ಚಿಕ್ಕಬಳ್ಳಾಪುರ: ಕೋಲಾರ ಕ್ಷೇತ್ರದ ಹಾಲಿ ಸಂಸದ ಕೆ ಹೆಚ್ ಮುನಿಯಪ್ಪ ವಿರುದ್ದ ಭೂಕಬಳಿಕೆ ಆರೋಪದಡಿ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವ್ಯಾಪ್ತಿಯ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ನಿರ್ಗತಿಕ ಎಂದು ನಾಲ್ಕು ಎಕರೆ ಜಮೀನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡಿದ್ದ ಮುನಿಯಪ್ಪ ಫ್ಯಾಮಿಲಿ ಬರೋಬ್ಬರಿ 410 ಎಕರೆ ಕಬಳಿಕೆ ಮಾಡಿದೆ ಎಂದು ಆರೋಪ ಮಾಡಿ ದೂರು ದಾಖಲಿಸಿದ್ದಾರೆ.

ಕೆ ಹೆಚ್ ಮುನಿಯಪ್ಪ ವಿರುದ್ದ ಭೂಕಬಳಿಕೆ ಆರೋಪದಡಿ ದೂರು

ಕುಟುಂಬದವರ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಸಂಸದ ಕೆ ಹೆಚ್ ಮುನಿಯಪ್ಪ ಶಿಡ್ಲಘಟ್ಟ ತಾಲೂಕಿನ ಗೊರಮಿಳ್ಳಹಳ್ಳಿಯಲ್ಲಿ 410 ಎಕರೆ ಭೂಕಬಳಿಕೆ ಮಾಡಿದ್ದಾರೆ ಎಂದು ಬಿಜೆಪಿ ಪಕ್ಷದ ಕಾರ್ಪೋರೇಟರ್ ಮುನಿಸ್ವಾಮಿ ಆರೋಪ ಮಾಡಿದ್ದಾರೆ

ಇನ್ನೂ ಜೊತೆಗೆ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೂರಾರು ಎಕರೆ ಜಮೀನು ಕಬಳಿಸಿರುವ ಆರೋಪ‌ವು ಸಹ ಇದೇ ವೇಳೆ ಬೆಳಕಿಗೆ ಬಂದಿದೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details