ಚಿಕ್ಕಬಳ್ಳಾಪುರ: ನಿನ್ನೆ ಜಿಲ್ಲೆಯಲ್ಲಿ 47 ಪ್ರಕರಣಗಳು ಕಂಡು ಬಂದಿದ್ದವು. ಇಂದು ಹೊಸದಾಗಿ ಮತ್ತೆ 20 ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬಿಡದ ಕೊರೊನಾ: ಸೋಂಕಿತರ ಸಂಖ್ಯೆ 93ಕ್ಕೆ ಏರಿಕೆ
ಇಂದು ಚಿಕ್ಕಬಳ್ಳಾಪುರಲ್ಲಿ 20 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು 20 ಕೊರೊನಾ ಪಾಸಿಟಿವ್
ಇಂದು 20 ಕೊವೀಡ್-19 ಪ್ರಕರಣಗಳು ದೃಢಪಟ್ಟಿದ್ದು, ಮಹಾರಾಷ್ಟ್ರದಿಂದ ಬಂದಂತಹ ಕೂಲಿ ಕಾರ್ಮಿಕರಿಂದ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಇದರಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಮಹಾರಾಷ್ಟ್ರದಿಂದ ಬಂದವರಲ್ಲಿ ಇದುವರೆಗೂ 67 ಸೋಂಕಿತರು ಪತ್ತೆಯಾಗಿದ್ದು, ಸದ್ಯ ಸೋಂಕಿತರಿಗೆ ಜಿಲ್ಲೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.