ಕರ್ನಾಟಕ

karnataka

ETV Bharat / state

ಪತಿ ಬಿಟ್ರೇನು ನಾ ಇರುವೆ ಎಂದು ಪ್ರೆಗ್ನೆಂಟ್‌ ಮಾಡಿದ.. ಅಬಾರ್ಷನ್ ಮಾಡಿಸಿ ಕೈಕೊಟ್ಹೋದ - ಚಾಮರಾಜನಗರ ಪೊಲೀಸ್ ಠಾಣೆ

2 ವರ್ಷಗಳ ತನಕ ಜೊತೆಯಲ್ಲಿದ್ದು ಗರ್ಭಿಣಿಯಾದಾಗ ಗರ್ಭಪಾತವೂ ಮಾಡಿಸಿ, ಈಗ ಒಲ್ಲೆ ಎನ್ನುತ್ತಿದ್ದಾನೆ. ಈತನಿಗಾಗಿ ತವರನ್ನು ತೊರೆದು ಬಂದಿದ್ದು, ಆಶ್ರಯವೇ ಇಲ್ಲದೇ ಅತಂತ್ರಳಾಗಿದ್ದೇನೆ..

chamaraj nagar police station
ಚಾಮರಾಜನಗರ ಪೊಲೀಸ್ ಠಾಣೆ

By

Published : Nov 24, 2020, 7:09 PM IST

ಚಾಮರಾಜನಗರ :‌ಕೌಟುಂಬಿಕ ಕಲಹದಿಂದ ಪತಿ ತೊರೆದಿದ್ದ ಯುವತಿಗೆ ಬಾಳು ಕೊಡುತ್ತೇನೆಂದು ಮದುವೆಯಾಗಿ ಈಗ ಕೈಕೊಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ನಡೆದಿದೆ.

ಪತಿ ಬಿಟ್ಟಾಕೆಗೆ ಬಾಳು ಕೊಡುತ್ತೇನೆಂದು ಕೈಕೊಟ್ಟ..

ಗ್ರಾಮದ ಮಹೇಶ್(25) ಎಂಬಾತನ ವಿರುದ್ಧ ಅದೇ ಗ್ರಾಮದ ಯುವತಿ ಆರೋಪಿಸಿದ್ದಾರೆ. ಈಗಾಗಲೇ ಯುವತಿಗೆ ವಿವಾಹವಾಗಿ 8 ವರ್ಷದ ಮಗುವಿದ್ದು, ಕಳೆದ 2 ವರ್ಷದ ಹಿಂದೆ ಸಮುದಾಯದ ಪಂಚಾಯ್ತಿ ಮೂಲಕ ಪತಿಯನ್ನು ತೊರೆದಿದ್ದರು. ಅದಾದ, ಬಳಿಕ ಮಹೇಶ್ ಬಾಳು ಕೊಡುತ್ತೇನೆಂದು ಗುಟ್ಟಾಗಿ ವಿವಾಹ ಮಾಡಿಕೊಂಡಿದ್ದ ಎನ್ನಲಾಗಿದೆ.

2 ವರ್ಷಗಳ ತನಕ ಜೊತೆಯಲ್ಲಿದ್ದು ಗರ್ಭಿಣಿಯಾದಾಗ ಗರ್ಭಪಾತವೂ ಮಾಡಿಸಿ, ಈಗ ಒಲ್ಲೆ ಎನ್ನುತ್ತಿದ್ದಾನೆ. ಈತನಿಗಾಗಿ ತವರನ್ನು ತೊರೆದು ಬಂದಿದ್ದು, ಆಶ್ರಯವೇ ಇಲ್ಲದೇ ಅತಂತ್ರಳಾಗಿದ್ದೇನೆ. ಅವನೊಂದಿಗೆ ಜೀವನ ಸಾಗಿಸಬೇಕೆಂದು, ನ್ಯಾಯ ದೊರಕಿಸಿಕೊಡಬೇಕೆಂದು ಅಳಲು ತೋಡಿಕೊಂಡಿದ್ದಾರೆ.

ಸದ್ಯ, ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನೊಂದ ಯುವತಿ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾಳೆ.

ABOUT THE AUTHOR

...view details