ಚಾಮರಾಜನಗರ: ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಕಾಡಾನೆಯೊಂದು ಅಟ್ಟಾಡಿಸಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಟೈಗರ್ ರೋಡ್ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಎಂದಿನಂತೆ ನಾಲ್ವರು ಗಸ್ತು ತಿರುಗುತ್ತಿದ್ದಾಗ ಪೊದೆ ಬಳಿ ನಿಂತಿದ್ದ ಕಾಡಾನೆಯೊಂದು ದಿಢೀರ್ ಪ್ರತ್ಯಕ್ಷವಾಗಿ ದಾಳಿ ಮಾಡಲು ಮುಂದಾಗಿದೆ. ಅರಣ್ಯ ಇಲಾಖೆ ವಾಹನ ಚಾಲಕ ಶ್ರೀಕಂಠ ಎಂಬುವರು ರಿವರ್ಸ್ ಗೇರಿನಲ್ಲೇ ಚಾಕಚಕ್ಯತೆಯಿಂದ ಜೀಪ್ ಅನ್ನು ಚಲಾಯಿಸಿ ಆಗುತ್ತಿದ್ದ ಅನಾಹುತ ತಪ್ಪಿಸಿದ್ದಾರೆ.
ಫಾರೆಸ್ಟ್ ಸಿಬ್ಬಂದಿ ಜೀಪ್ ಅಟ್ಟಾಡಿಸಿದ ಕಾಡಾನೆ ಸಾಮಾನ್ಯವಾಗಿ ಈ ರೀತಿ ಘಟನೆಗಳು ಕಾಡಿನಲ್ಲಿ ನಡೆಯಲಿದ್ದು ಆತಂಕ, ಅಪಾಯದ ಭಯದಿಂದಾಗಿ ಆನೆಗಳು ಈ ರೀತಿ ಅಟ್ಟಾಡಿಸಿಕೊಂಡು ಬರುತ್ತವೆ. ಸಾಕಷ್ಟು ಬಾರಿ ಸಫಾರಿಗೆ ತೆರಳುವ ಪ್ರವಾಸಿಗರನ್ನು ಕಾಡಾನೆ ಅದರಲ್ಲೂ ಸಲಗ ಮತ್ತು ದಂತ ಮೂಡದ ಗಂಡಾನೆಗಳು ಈ ರೀತಿ ಅಟ್ಟಾಡಿಸುತ್ತವೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವನ್ಯಜೀವಿ ಹೋರಾಟಗಾರ ಜೋಸೆಫ್ ಹೂವರ್ ಸೇರಿದಂತೆ ಬಹಳಷ್ಟು ನೆಟ್ಟಿಗರು ಶ್ರೀಕಂಠ ಚಾಲನ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಹೋಳಿ ರಜೆ ನಂತರ ಸುಪ್ರೀಂಕೋರ್ಟ್ನಲ್ಲಿ ಹಿಜಾಬ್ ಮೇಲ್ಮನವಿ ಅರ್ಜಿ ವಿಚಾರಣೆ