ಚಾಮರಾಜನಗರ:ಕೆಲವು ದಿನಗಳ ಹಿಂದೆ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದ ಜಮೀನಿನಲ್ಲಿ ಶವಪತ್ತೆ ಪ್ರಕರಣವನ್ನು ಬೇಗೂರು ಪೊಲೀಸರು ಬೇಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿ ಕಂಬಿ ಹಿಂದಕ್ಕೆ ತಳ್ಳಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಗ್ರಾಮದ ಶ್ರೀನಿಧಿ ಹಾಗೂ ಶ್ರೀನಿವಾಸ್ ಎಂಬವರು ಬಂಧಿತ ಆರೋಪಿಗಳು.
ಚಾಮರಾಜನಗರ: ಜಮೀನು ವಿಚಾರಕ್ಕೆ ಚಿಕ್ಕಪ್ಪನನ್ನೇ ಕೊಂದು ನೇತು ಹಾಕಿದ ಮಕ್ಕಳು! - ಚಾಮರಾಜನಗರ ಅಪರಾಧ ಸುದ್ದಿ
ಚಾಮರಾಜನಗರದಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಪ್ಪನನ್ನೇ ಕೊಂದು ನೇತು ಹಾಕಿದ ಮಕ್ಕಳು ಈಗ ಕಂಬಿ ಎಣಿಸುತ್ತಿದ್ದಾರೆ.
ಜಮೀನು ವಿಚಾರಕ್ಕೆ ಚಿಕ್ಕಪ್ಪನನ್ನೇ ಕೊಂದು ನೇತು ಹಾಕಿದ ಮಕ್ಕಳು
ಓದಿ:ಇಮ್ರಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ: ಪಾಕ್ ಮಾಜಿ ಸಚಿವನ ಆರೋಪ
ಗರಗನಹಳ್ಳಿ ಗ್ರಾಮದ ನಾಗೇಶ್ (55) ಎಂಬವರನ್ನು ದಾಯಾದಿ ಸಂಬಂಧಿಗಳಾದ ಈ ಇಬ್ಬರು ಆರೋಪಿಗಳು ಹೊಡೆದು ಕೊಂದು ಬಳಿಕ ನೇಣು ಬಿಗಿದು ಪರಾರಿಯಾಗಿದ್ದರು ಎನ್ನಲಾಗಿದೆ. ತಲೆಮರೆಸಿಕೊಂಡಿದ್ದ ಈ ಇಬ್ಬರನ್ನು ಬೇಗೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜಮೀನು ವಿಚಾರಕ್ಕೆ ಸಂಬಂಧ ಚಿಕ್ಕಪ್ಪನನ್ನೇ ಕೊಂದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದ ವಿಚಾರವಾಗಿದೆ.